ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿದ್ದಾರೆ.
ನಿರೀಕ್ಷೆಯಂತೆ ಉಪ ಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರಿಗೆ ಎರಡು ಪ್ರಮುಖ ಖಾತೆಗಳು ದಕ್ಕಿವೆ.
ಜಲಸಂಪನ್ಮೂಲ ಖಾತೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಗಿಟ್ಟಿಸಿಕೊಳ್ಳಲು ಡಿಕೆಶಿವಕುಮಾರ್ ಅವರು ಯಶಸ್ವಿ ಆಗಿದ್ದಾರೆ.
ಸಿಎಂ ಸ್ಥಾನಕ್ಕಾಗಿ ಬೇಡಿಕೆ ಸಡಿಲಿಸಿದ್ದ ಡಿಕೆಶಿವಕುಮಾರ್ ಅವರು ಡಿಸಿಎಂ ಹುದ್ದೆಯ ಜೊತೆಗೆ ಎರಡು ದೊಡ್ಡ ಖಾತೆಗಳನ್ನು ನೀಡಬೇಕೆಂಬ ಬೇಡಿಕೆ ಇಟ್ಟಿದ್ದರು.