ಡಿಜೆ ಸೌಂಡ್ ಎಫೆಕ್ಟ್ : ಕುಣಿಯುತ್ತಲೇ ಹೃದಯಾಘಾತದಿಂದ ವ್ಯಕ್ತಿ ಸಾವು

ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿಯುವಾಗ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತನನ್ನು ತುಮಕೂರು ತಾಲ್ಲೂಕಿನ ಹೆಬ್ಬಾಕ ಗ್ರಾಮದ ವಿರೂಪಾಕ್ಷ (48) ಎಂದು ಗುರುತಿಸಲಾಗಿದೆ.

ತಡರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಸೌಂಡ್ಸ್ ಹಾಕಲಾಗಿತ್ತು. ಸೌಂಡ್​ಗೆ ಕುಣಿಯುವಾಗ ವಿರೂಪಾಕ್ಷ ಸಾವನ್ನಪ್ಪಿದ್ದಾನೆ.

ಡಿಜೆ ಸೌಂಡ್ಸ್ ಎಫೆಕ್ಟ್‌ಗೆ ಹೃದಯಾಘಾತವಾಗಿರುವ ಶಂಕೆ‌ ವ್ಯಕ್ತವಾಗಿದೆ. ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : Lumpy Virus : ಲಂಫಿ ವೈರಸ್​​ನಿಂದ 25 ಜಿಲ್ಲೆಗಳ 126 ಹಸುಗಳು ಸಾವು

LEAVE A REPLY

Please enter your comment!
Please enter your name here