ಬಿಜೆಪಿ ಸರ್ಕಾರ ಅಂದರೇನೆ ಭ್ರಷ್ಟ ಸರ್ಕಾರ: ವಿಪಕ್ಷ ನಾಯಕ ಸಿದ್ಧರಾಮಯ್ಯ

ಹುಬ್ಬಳ್ಳಿ: ಬಿಜೆಪಿ ಸರ್ಕಾರ ಅಂದರೇನೆ ಭ್ರಷ್ಟ ಸರ್ಕಾರ. ಒಬ್ಬ ಮುಖ್ಯಮಂತ್ರಿ ಹೋದರೆ ಮತ್ತೊಬ್ಬ ಬಂದು ಕೂಡುತ್ತಾರೆ. ಹೀಗಾಗಿ ಈ ಸರ್ಕಾರವೇ ತೊಲಗಲಿ ಎಂಬುವುದೇ ನನ್ನ ನಿಲುವು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದರು.                                                                                                                                                                                                                        ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಭ್ರಷ್ಟ ನಾಯಕ ಹೋದರೆ ಬಳಿಕ ಬರೋನು ಭ್ರಷ್ಟನೇ ಆಗಿರುತ್ತಾನೆ. ಹಾಗಾಗಿ ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ, ಜನರು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದು, ಅವರು ಮುಖ್ಯಮಂತ್ರಿ ಆಯ್ಕೆ ಮಾಡುತ್ತಾರೆ. ಮಠಾಧೀಶರು ಈ ರಾಜಕೀಯ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದನ್ನು ಬಿಟ್ಟು ಪ್ರವಚನ, ಸಮಾಜಕ್ಕೆ ಮಾರ್ಗದರ್ಶನ ಮಾಡುವ ಕೆಲಸ ಮಾಡಲಿ ಎಂದರು.

ಇನ್ನು  ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಸಿಕ್ಕಿ ಬಿದ್ದಿದ್ದು, ತಕ್ಷಣ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

 

 

 

LEAVE A REPLY

Please enter your comment!
Please enter your name here