ದಿಶಾಗಿಂತ ಮೊದಲು 9 `ಹತ್ಯಾ’ಚಾರ.. ಬೆಚ್ಚಿಬೀಳಿಸುತ್ತಿದೆ ಕಿರಾತಕರ ಹಿಸ್ಟರಿ

ಹೈದರಾಬಾದ್: ದಿಶಾ `ಹತ್ಯಾ’ಚಾರ ಪ್ರಕರಣದ ತನಿಖೆಯಲ್ಲಿ ಹೊಸ ಹೊಸ ಮತ್ತು ಬೆಚ್ಚಿಬೀಳಿಸುವ ಕಥನಗಳು ಬಯಲಿಗೆ ಬರುತ್ತಿವೆ. ದಿಶಾ `ಹತ್ಯಾ’ಚಾರಿಗಳ ಅಪರಾಧ ಕಥನ ಕೇಳಿದರೇ ನಿಮ್ಮ ಬೆನ್ನು ಹುರಿಯಲ್ಲಿ ನಡುಕ ಶುರುವಾಗುತ್ತದೆ.

ಎನ್‍ಕೌಂಟರ್‍ಗೆ ಮೊದಲು ನಡೆದ ವಿಚಾರಣೆ ವೇಳೆ ಆರೋಪಿಗಳು ತಾವು, ದಿಶಾ `ಹತ್ಯಾ’ಚಾರ ಪ್ರಕರಣಕ್ಕೂ ಮೊದಲು 9 ಮಂದಿ ಮಹಿಳೆಯರನ್ನು ಇದೇ ರೀತಿ ಅತ್ಯಾಚಾರ ಮಾಡಿ ಕೊಂದಿದ್ದೆವು ಎಂಬ ವಿಚಾರವನ್ನು ಬಾಯಿ ಬಿಟ್ಟಿದ್ದರು ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿಯೂ `ಹತ್ಯಾ’ಚಾರ
`ಹತ್ಯಾ’ಚಾರದ ಪ್ರಧಾನ ಸೂತ್ರಧಾರಿ ಆರೀಫ್ ಮೊಹ್ಮದ್ 6 `ಹತ್ಯಾ’ಚಾರಗಳನ್ನು, ಮತ್ತೊಬ್ಬ ಆರೋಪಿ ಚನ್ನಕೇಶವುಲು 3 `ಹತ್ಯಾ’ಚಾರ ಎಸಗಿದ್ದಾರೆ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದರು. ಈ `ಹತ್ಯಾ’ಚಾರಗಳನ್ನು ಹೈದರಾಬಾದ್, ಮೆಹಬೂಬ್ ನಗರ್, ಸಂಗಾರೆಡ್ಡಿ, ರಂಗಾರೆಡ್ಡಿ ಮತ್ತು ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳ ಸಮೀಪವೇ ಈ ಕೃತ್ಯಗಳನ್ನು ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದರು ಎಂದು ತಿಳಿದುಬಂದಿದೆ.

ಪ್ರತಿಯೊಂದು `ಹತ್ಯಾ’ಚಾರವೂ ಸೇಮ್ ಟು ಸೇಮ್
ಆರೋಪಿಗಳಿಗೆ ದಿಶಾ `ಹತ್ಯಾ’ಚಾರ ಪ್ರಕರಣ ಹೊಸದಲ್ಲ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಪ್ರತಿಯೊಂದು `ಹತ್ಯಾ’ಚಾರ ಪ್ರಕರಣದಲ್ಲಿಯೂ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿ ನಂತರ ಮೃತದೇಹಗಳನ್ನು ದಹನ ಮಾಡುತ್ತಿದ್ದರು ಎನ್ನಲಾಗಿದೆ.

ತನಿಖೆ ಚುರುಕು..
ದಿಶಾ ಹತ್ಯಾಚಾರಿಗಳ ತಪ್ಪೊಪ್ಪಿಗೆ ಹೇಳಿಕೆ ಪ್ರಕಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಹೇಳಿದ ಕಡೆಗಳಲ್ಲಿ 15 ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ ಪೊಲೀಸರು ಡಿಎನ್‍ಎ ವರದಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ, ತುಂಬಾ ಪ್ರಕರಣಗಳಲ್ಲಿ ಮೃತದೇಹಗಳು ಸಂಪೂರ್ಣವಾಗಿ ಸುಟ್ಟುಹೋಗಿರುವ ಕಾರಣ ಡಿಎನ್‍ಎ ಪರೀಕ್ಷೆಗಳಲ್ಲಿ ಸರಿಯಾದ ಫಲಿತಾಂಶ ಬಂದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಪೊಲೀಸರು ಶಾಸ್ತ್ರೀಯ ಪದ್ಧತಿಯಲ್ಲಿ ತನಿಖೆ ಶುರು ಮಾಡಿದ್ದು, 15 ಮಂದಿ ಮೃತರ ಡಿಎನ್‍ಎ ವಿಶ್ಲೇಷಣೆ ನಡೆಸಿದ್ದಾರೆ. ದಿಶಾ ಪ್ರಕರಣದ ಚಾರ್ಜ್‍ಶೀಟ್‍ನಲ್ಲಿ ಆರೋಪಿಗಳ ಅಪರಾಧ ಹಿಸ್ಟರಿಯನ್ನು ಉಲ್ಲೇಖಿಸುವ ಅವಕಾಶಗಳು ಇವೆ.

LEAVE A REPLY

Please enter your comment!
Please enter your name here