ಗನ್​ಮ್ಯಾನ್​ ಪಿಸ್ತೂಲ್​ನಿಂದ ಶೂಟ್​ ಮಾಡ್ಕೊಂಡು ಹಿರಿಯ ಪೊಲೀಸ್​ ಅಧಿಕಾರಿ ಆತ್ಮಹತ್ಯೆ

ತಮಿಳುನಾಡಿನ ಉನ್ನತ ಪೊಲೀಸ್​ ಅಧಿಕಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಯಮುತ್ತೂರು ವಲಯದ ಡಿಐಜಿ ವಿಜಯ್​ ಕುಮಾರ್​ ಸಾವಿಗೆ ಶರಣಾಗಿದ್ದಾರೆ.

ತಮ್ಮ ಗನ್​ಮ್ಯಾನ್​ನ ಸರ್ವಿಸ್​ ರಿವಾಲ್ವರ್​ನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. 45 ವರ್ಷದ ಇವರು ತಮಿಳುನಾಡಿನ ತೇಣಿ ಮೂಲದವರು.

ಕೊಯಮುತ್ತೂರಿನ ರೇಸ್​ಕೋರ್ಸ್​ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವತ್ತು ಬೆಳಗ್ಗೆ 6.45ರ ವೇಳೆಗೆ ವಾಕಿಂಗ್​ನಿಂದ ವಾಪಸ್​ ಆದ ಬಳಿಕ ತಮ್ಮ ಭದ್ರತಾ ಸಿಬ್ಬಂದಿಯ ರಿವಾಲ್ವರ್​ ಪಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಡಿಐಜಿ ವಿಜಯ್​ಕುಮಾರ್​ ಖಿನ್ನತೆಗೆ ಒಳಗಾಗಿದ್ದರು ಮತ್ತು ಅವರಿಗೆ ನಿದ್ರೆಯ ಕೊರತೆ ಕಾರಣದಿಂದ ಚಿಕಿತ್ಸೆಯನ್ನೂ ನೀಡಲಾಗ್ತಿತ್ತು. ಕೆಲ ದಿನಗಳ ಹಿಂದೆಯಷ್ಟೇ ಅವರ ಕುಟುಂಬದವರನ್ನೂ ಕೊಯಮುತ್ತೂರಿಗೆ ಕರೆಸಿಕೊಳ್ಳಲಾಗಿತ್ತು.

LEAVE A REPLY

Please enter your comment!
Please enter your name here