ಮುಸ್ಲಿಂ ಎಂದು ಭಾವಿಸಿ ಅಂಗವಿಕಲ ಜೈನ ಸಮುದಾಯದ ವ್ಯಕ್ತಿಯ ಹತ್ಯೆ ನಡೆದಿದೆ ಎನ್ನಲಾದ ಘಟನೆ ಶನಿವಾರ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ವರದಿಯಾಗಿದೆ.
ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಅಂಗವಿಕಲ ಜೈನ್ ವ್ಯಕ್ತಿಯನ್ನು ಮುಸ್ಲಿಂ ಎಂದು ಭಾವಿಸಿ ಬಿಜೆಪಿಯ ನಾಯಕರೊಬ್ಬರು ಹಲ್ಲೆ ಮಾಡಿದ್ದಾರೆ. ಅನಂತರದ ಸಮಯದಲ್ಲಿ ಹಲ್ಲೆಗೊಳಗಾದ ಜೈನ್ ವ್ಯಕ್ತಿ ಬನ್ವರಿಲಾಲ್ ಅವರ ಮೃತದೇಹ ಪತ್ತೆಯಾಗಿದೆ.
ಬಿಜೆಪಿಯ ಕಾರ್ಪೋರೇಟರ್ ಪತಿ ದಿನೇಶ್ ಕುಶ್ವಂತ್ ಈ ಅಂಗವಿಕಲ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನೀಮುಚ್ ಜಿಲ್ಲೆಯ ಮಾನಸ ಪೊಲೀಸ್ ಸ್ಟೇಷನ್ ಅಧಿಕಾರಿ ಕನ್ನಯ್ಯ ಲಾಲ್ ಡಂಗಿಯವರು, ಒಂದು ನಿರ್ಧಿಷ್ಠ ಸಮುದಾಯಕ್ಕೆ ಸೇರಿದ್ದಾನೆ ಎಂದು ಭಾವಿಸಿ ಜೈನ್ ಸಮುದಾಯದ ಅಂಗವಿಕಲ ವ್ಯಕ್ತಿಯ ಮೇಲೆ ಬಿಜೆಪಿಯ ನಾಯಕ ದಿನೇಶ್ ಕುಶ್ವಂತ್ ಹಲ್ಲೆ ಮಾಡಿದ್ದಾನೆ. ಸ್ವಲ್ಪ ಸಮಯದ ನಂತರ ಹಲ್ಲೆಗೊಳಗಾದ ವ್ಯಕ್ತ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಆರೋಪಿ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.