ಡಯಾಬಿಟಿಸ್ ಭಯಾನಕ ರೋಗದ ಬಗ್ಗೆ ಒಂದಿಷ್ಟು ಮಾಹಿತಿ

ಸಕ್ಕರೆ ಕಾಯಿಲೆ ಅಂತಾ ಕರೆಸಿಕೊಳ್ಳುವ ಮಧುಮೇಹ ಅಥವಾ ಡಯಾಬಿಟಿಸ್​​ ಇತ್ತೀಚಿನ ದಿನದಲ್ಲಿ ಯಾರನ್ನೂ ಬಿಟ್ಟಿಲ್ಲ. ಮಕ್ಕಳಲ್ಲೂ ಈ ಮಧುಮಹ ಕಾಣಿಸಿಕೊಳ್ತಿದೆ. ಈ ಮಧು ಮೇಹ ಸಕ್ಕರೆ ತಿಂದರೆ ಮಾತ್ರ ಬರುತ್ತೆ ಅಂತಾ ಎಷ್ಟೋ ಜನ ತಪ್ಪು ತಿಳಿದಿದ್ದಾರೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಸಕ್ಕರೆ ಅತಿಯಾದರೆ ವಿಷವೂ ಆಗುತ್ತೆ.

ಪ್ರತಿನಿತ್ಯ ನಾವು ಸೇವಿಸುವ ಎಲ್ಲರೀತಿಯ ಆಹಾರದಿಂದ ಗ್ಲುಕೋಸ್​ನ್ನು (ಸಕ್ಕರೆಯ ಅಂಶ) ದೇಹಕ್ಕೆ ಪಡೆಯುತ್ತೇವೆ. ಆದ್ರೆ ನಮ್ಮ ದೇಹ ಈ ಗ್ಲುಕೋಸ್​ ಬಳಸಿಕೊಳ್ಳಲಾಗದೇ ಅದು ಮೂತ್ರದ ಮೂಲಕ ಹೊರಹೋಗುತ್ತದೆ. ಈ ಬಗೆಯ ಕಾಯಿಲೆಯನ್ನ ಇದನ್ನೇ ನಾವು ಮಧುಮೇಹ ಎಂದು ಕರೆಯುತ್ತೇವೆ.  ಮೊದಲು ನಾವು ಮಧುಮೇಹ ಅಂದ್ರೇನು, ಹೇಗೆ ಬರುತ್ತೆ..? ಲಕ್ಷಣಗಳೇನು ಅನ್ನೋದನ್ನು ನೋಡೋಣ

ನಮ್ಮ ದೇಹದ ಪ್ರತಿ ಜೀವಕೋಶಗಳು ಕಾರ್ಯ ನಿರ್ವನಿಸಲು ಗ್ಲುಕೋಸ್ ಬೇಕು. ಆದರೆ ಗ್ಲುಕೋಸ್​ ದೇಹದಲ್ಲಿ ಬಳಕೆ ಆಗದೇ  ಹೊರಹೋಗುತ್ತಿರುತ್ತದೆ. ಇದರಿಂದ ಜೀವಕೋಶಗಳ ಕಾರ್ಯ ನಿರ್ವಹಣೆಗೆ ಗ್ಲುಕೋಸ್ ಲಭ್ಯ ಆಗುವುದಿಲ್ಲ. ಗ್ಲುಕೋಸ್​ ಬಳಸಿಕೊಳ್ಳಲು ಮೆದೋಜೀರಕ ಗ್ರಂಥಿಯಿಂದ ಇನ್ಸುಲಿನ್ ಉತ್ಪತ್ತಿ ಆಗುತ್ತದೆ.

ಮಧುಮೇಹದಲ್ಲಿ 2 ರೀತಿಯನ್ನ ಕಾಣಬಹುದು,ಅದನ್ನು ಟೈಪ್-1, ಟೈಪ್-2 ಮಧುಮೇಹ ಎನ್ನುತ್ತೇವೆ.

ಟೈಪ್-1ನಲ್ಲಿ ಗ್ಲುಕೋಸ್​ ಬಳಕೆಗೆ ಬೇಕಾಗುವ ಇನ್ಸುಲಿನ್ ಉತ್ಪಾದನೆ ಆಗುವುದಿಲ್ಲ. ಇನ್ಸುಲಿನ್ ಉತ್ಪಾದಿಸಲು ಮೆದೋಜೀರಕ ಗ್ರಂಥಿಗೆ ಆಗುವುದಿಲ್ಲ. ಇದರಿಂದ ಮಧುಮೇಹ ಬರಬಹುದು

ಟೈಪ್-2ನಲ್ಲಿ ಸಾಕಷ್ಟು ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾದರೂ ಇದನ್ನು ಬಳಸಿಕೊಳ್ಳಲು ಆಗುವುದಿಲ್ಲ.

ಟೈಪ್-1 ಬಗೆಯ ಮಧುಮೇಹ ವಿಶ್ವದ ಶೇಕಡಾ 5 ರಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತೆ. ಇವರು ತಮ್ಮ ಜೀವನಕ್ರಮವನ್ನು ಬದಲಾಯಿಸಿಕೊಂಡರೆ ಸಾಕು. ಆಹಾರದಲ್ಲಿ ನಿಯಮ ಪಾಲಿಸಿದರೆ ಟೈಪ್-1 ಮಧುಮೇಹವನ್ನು ನಿಯಂತ್ರಿಸಿಕೊಳ್ಳಬಹುದು.ಇಂತಾ ಮಧುಮೇಹ ಸಾಮಾನ್ಯವಾಗಿ 40ಕ್ಕೂ ಕಡಿಮೆ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತದೆ

ಅತಿ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುವುದು ಟೈಪ್-2 ಮಧುಮೇಹ. ವಯಸ್ಸು ಹೆಚ್ಚಿದಂತೆಲ್ಲಾ ದೇಹದ ಭಾಗಗಳು ಕಾರ್ಯಕ್ಷಮತೆ ಕಳೆದುಕೊಳ್ಳುತ್ತವೆ. 40 ದಾಟಿದ ವಯಸ್ಸಿನವರಲ್ಲಿ ಇದು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾದರೂ ಅದು ಬಳಕೆಯಾಗದ ಕಾರಣ ಮಧುಮೇಹ ಕಂಡುಬರುತ್ತದೆ.

ಟೈಪ್-1 ಮಧುಮೇಹ ಪ್ರಾರಂಭದಲ್ಲೇ ತನ್ನ ಸೂಚನೆ ನೀಡುತ್ತದೆ. ಆದ್ರೆ ಟೈಪ್-2 ಮಧುಮೇಹ ಪ್ರಾರಂಭದಲ್ಲೇ ತನಗನ ಸೂಚನೆ ನೀಡುವುದಿಲ್ಲ

ಮಧುಮೇಹದ ಪ್ರಮುಖ ಲಕ್ಷಣ

 • ಸುಸ್ತು
 • ಅತಿ ಬಾಯಾರಿಕೆ
 • ಸತತವಾಗಿ ಮೂತ್ರಕ್ಕೆ ಅವಸರ ಆಗುವುದು
 • ದೃಷ್ಟಿ ಮಂಜಾಗುವುದು
 • ತೂಕದಲ್ಲಿ ಇಳಿಕೆ
 • ಹಸ್ತ ಮತ್ತು ಪಾದದಲ್ಲಿ ಸೂಜಿ ಚುಚ್ಚಿದಂತೆ ಭಾಸವಾಗುವುದು
 • ಒಸಡುಗಳಲ್ಲಿ ನೋವು
 • ಗಾಯವಾದರೆ ರಕ್ತ ಹೆಪ್ಪುಗಟ್ಟಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು

ಇವುಗಳು ನಿಮ್ಮ ಗಮನಕ್ಕೆ ಬರಬಹುದು ಇಲ್ಲವೇ ಬರದೆಯೂ ಹೋಗಬಹುದು. ಒಂದು ವೇಳೆ ನಿಮ್ಮ ಗಮನಕ್ಕೆ ಈ ಲಕ್ಷಣಗಳು ಕಂಡುಬಂದರೆ. ಕೂಡಲೇ ತಜ್ಞ ವೈದ್ಯರನ್ನ ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕಿರುತ್ತದೆ

ದೇಹದಲ್ಲಿ ಇನ್ಸುಲಿನ್ ಇಲ್ಲದಿದ್ರೆ ಅಥವಾ ಇದ್ದರೂ ಬಳಸಿಕೊಳ್ಳಲಾಗದಿದ್ರೆ ಗ್ಲುಕೋಸ್ ಬಳಕೆಯಾಗುವುದಿಲ್ಲ. ಗ್ಲುಕೋಸ್ ಹೊರಹೋಗುತ್ತದೆ. ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಆಹಾರದಿಂದ ದೊರಕುವ ಗ್ಲುಕೋಸ್​​ಅನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.

ಮಧುಮೇಹ ಕಾಣಿಸಿಕೊಳ್ಳಲು ಕಾರಣ

 • ನಲವತ್ತು ವಯಸ್ಸು ದಾಟಿದ ವ್ಯಕ್ತಿಗಳು
 • ಸ್ಥೂಲಕಾಯ
 • ಅನುವಂಶಿಕ ಕಾರಣಗಳು
 • ಆರಾಮದಾಯಕ ಜೀವನಕ್ರಮ, ಅನಾರೋಗ್ಯಕರ ಆಹಾರಾಭ್ಯಾಸ
 • ತೀವ್ರ ರಕ್ತದೊತ್ತಡ
 • ವ್ಯಾಯಾಮ ಮಾಡದೇ ಇರುವುದು
 • ಧೂಮಪಾನ, ಮದ್ಯಪಾನ, ತಂಬಾಕು ಸೇವನೆ

ಮಧುಮೇಹ ಎದುರಾದ ಬಳಿಕ ಇದನ್ನು ಪೂರ್ಣವಾಗಿ ಗುಣಪಡಿಸಲು ಆಗಲ್ಲ. ಆದ್ರೆ ಇದನ್ನು ನಿಯಂತ್ರಿಸುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದು. ಮಧುಮೇಹಕ್ಕೆ ಔಷಧಿಗಳು ಇದ್ದರೂ ಅದು ರೋಗವನ್ನ ಗುಣಪಡಿಸಲು ಆಗಲ್ಲ. ಕೇವಲ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ.. ಜೀವನ ಪೂರ್ತಿ ವೈದ್ಯರು ನೀಡುವ ಮಾತ್ರೆಗಳನ್ನ ಸೇವಿಸುತ್ತಲೇ ಇರಬೇಕು. ಜೀವನ ಶೈಲಿ, ಆಹಾರ ಕ್ರಮ ಬದಲಾವಣೆಯಿಂದ ಮಧುಮೇಹವನ್ನ ಬರದೇ ಇರದಂತಡ ನೋಡಿಕೊಳ್ಳಬಹುದು

ಮಧುಮೇಹ ಬಾರದಂತೆ ತಡೆಗಟ್ಟುವ ಕ್ರಮಗಳು

 • ಸರಿಯಾದ ಸಮಯಕ್ಕೆ ಬೆಳಗ್ಗಿನ ಉಪಾಹಾರ ಸೇವಿಸಿ
 • ಆಹಾರದಲ್ಲಿ ಕಾರ್ಬೋ ಹೈಡ್ರೇಟ್​​​ಗಳನ್ನು ಕಡಿಮೆ ಮಾಡಿ ( ಬ್ರೆಡ್, ಆಲೂಗಡ್ಡೆ ಮೊದಲಾದ ಪಿಷ್ಟ ಪದಾರ್ಥಗಳನ್ನು ಕಡಿಮೆ ಮಾಡಿ)
 • ಬೆರ್ರಿ, ಕಿತ್ತಳೆ,, ಸೌತೆ, ಬೀಟ್ರೂಟ್, ಮೂಲಂಗಿ ಸೇರಿ ಹಣ್ಣು, ತರಕಾರಿಗಳನ್ನ ಹೆಚ್ಚು ಸೇವಿಸಿ
 • ಊಟದಲ್ಲಿ ವಿಭಿನ್ನ ಬಗೆಯ ಧಾನ್ಯಗಳನ್ನು ಸೇವಿಸಿ
 • ಮೆಂಥ್ಯೆ ಸೊಪ್ಪು,ಕಾಳಿ, ಬೆಂಡೆಕಾಯಿ, ಹಾಗಲಕಾಯಿ, ಪಪ್ಪಾಯಿ, ಸೀಬೆಹಣ್ಣು, ಓಟ್ಸ್​, ಗೋಧಿ, ರಾಗಿಯನ್ನು ಹೆಚ್ಚು ಬಳಸಿ
 • ದಿನವಿಡೀ ನಿಮ್ಮನ್ನು ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.
 • ಆಹಾರದಲ್ಲಿ ಸಕ್ಕರೆ,ಉಪ್ಪುನ್ನು ಆದಷ್ಟು ಕಡಿಮೆ ಮಾಡಿ
 • ಯೋಗಾಭ್ಯಾಸ, ಪ್ರಾಣಾಯಾಮ ಮಾಡಿ, ಪ್ರತಿ ದಿನವೂ ಬೆಳಿಗ್ಗೆ, ಸಂಜೆ ವಾಕ್ ಮಾಡಿ

ಆರೋಗ್ಯದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು pratikshana.com ಓದುತ್ತಿರಿ.. ಈ ಲೇಖನ ಇಷ್ಟ ಆಗಿದ್ದಲ್ಲಿ ನಿಮ್ಮ ಸ್ನೇಹಿತರಿಗೆ ತಪ್ಪದೇ ಶೇರ್ ಮಾಡಿ.

LEAVE A REPLY

Please enter your comment!
Please enter your name here