ಧರ್ಮಸ್ಥಳದಲ್ಲಿ ಅನ್ನಪ್ರಸಾದ ಕೊಡುವುದು ನಿಲ್ಲಿಸಿಬಿಟ್ಟಿದ್ದಾರೆ: ಮಾಜಿ ಸಿಎಂ H D ಕುಮಾರಸ್ವಾಮಿ

ಧರ್ಮಸ್ಥಳದಲ್ಲಿ ಅನ್ನಪ್ರಸಾದ ಕೊಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಮತ್ತು ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್​ ಡಿ ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಕಾಂಗ್ರೆಸ್​ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಶಾಸಕ ಆರ್​ ಅಶೋಕ್​ ಅವರು ಟೀಕೆ ಮಾಡುತ್ತಿದ್ದ ವೇಳೆ ಮಧ್ಯಪ್ರವೇಶ ಮಾಡಿದ ಹೆಚ್​ಡಿಕೆ ಈ ಹೇಳಿಕೆ ನೀಡಿದ್ದಾರೆ.

ಅಧ್ಯಕ್ಷರೇ, ಅಶೋಕಣ್ಣ ಒಂದ್ನಿಮಿಷ..ಅಶೋಕಣ್ಣ ಒಂದ್ನಿಮಿಷ..ಈ 55 ಲಕ್ಷ ಜನ  ಹೆಣ್ಮಕ್ಕಳು ಓಡಾಟ ಮಾಡೋಕೆ ಶುರು ಮಾಡಿ..ಧರ್ಮಸ್ಥಳದಲ್ಲಿ ಹೋದಾಗ್ಲೆಲ್ಲ ಕರೆಕ್ಟಾಗಿ ಊಟ ಕೊಡ್ತಿದ್ರು. ಈ ಊಟವನ್ನು ನಿಲ್ಲಿಸಿಬಿಟ್ಟಿದ್ದಾರಂತಲ್ವಾ..ಮೊನ್ನೆ ಅದ್ಯಾವುದೋ ನೋಡ್ತಿದೆ..

ಎಂದು ಕುಮಾರಸ್ವಾಮಿ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಶಕ್ತಿ ಯೋಜನೆಯ ಕಾರಣದಿಂದ ಜನರ ಓಡಾಟ ಜಾಸ್ತಿಯಾಗಿರುವ ಕಾರಣ ಧರ್ಮಸ್ಥಳದಲ್ಲಿ ಊಟ ಕೊಡುವುದು ನಿಲ್ಲಿಸಿಬಿಟ್ಟಿದ್ದಾರೆ ಎಂದು ಹೆಚ್​ಡಿಕೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here