ADVERTISEMENT
ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ಶೂಟಿಂಗ್ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಶಂಕರ್ ರಾಮನ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ವಾಮನ ಸಿನಿಮಾದ ಫೈಟಿಂಗ್ ದೃಶ್ಯಗಳನ್ನು ಬೆಂಗಳೂರಿನ ಯಲಹಂಕದಲ್ಲಿ ಚಿತ್ರೀಕರಿಸಲಾಗ್ತಿತ್ತು. ಈ ವೇಳೆ ರೋಪ್ ನಿಂದ ಕೆಳಗೆ ಬಿದ್ದ ಧನ್ವೀರ್ ಕೈಗೆ ಪೆಟ್ಟಾಗಿದೆ. ತಕ್ಷಣ ಆಸ್ಪತ್ರೆಗೆ ತೆರಳಿ ಧನ್ವೀರ್ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ವಾಮನ ಶೂಟಿಂಗ್ ವೇಳೆ ಆದ ಅನಾಹುತದಿಂದ ಧನ್ವೀರ್ ಗೆ ಪಿಂಗರ್ ಫ್ಯಾಕ್ಚರ್ ಆಗಿದೆ. ಆಗಿದ್ದರೂ ಸಹ ಧನ್ವೀರ್ ಬ್ರೇಕ್ ಪಡೆದುಕೊಂಡು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಜಯತೀರ್ಥ ಆಕ್ಷನ್ ಕಟ್ ಹೇಳಿರುವ ಕೈವ ಸಿನಿಮಾದ ಶೂಟಿಂಗ್ ಗೆ ಡೇಟ್ ಫಿಕ್ಸ್ ಆಗಿದೆ. ಹೀಗಾಗಿ ಈ ಚಿತ್ರೀಕರಣಕ್ಕೆ ಯಾವುದೇ ತೊಂದರೆ ಆಗಬಾರದು ಅಂತಾ ಧನ್ವೀರ್ ಏಟಾದರು ವಾಮನ ಚಿತ್ರೀಕರಣ ಮುಂದುವರೆಸಿದ್ದಾರೆ.
ಈಕ್ವಿನಾಕ್ಸ್ ಗೋಬಲ್ ಎಂಟರ್ ಟೈನ್ಮೆಂಟ್ ಪ್ರೊಡಕ್ಷನ್ ನಡಿ ಚೇತನ್ ಕುಮಾರ್ ವಾಮನ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ADVERTISEMENT