ಈ ದಂತ ಸಮಸ್ಯೆಗಳು ನಿಮ್ಮನ್ನ ಕಾಡುತ್ತಿದೆಯೇ.? ಹಾಗಿದ್ರೆ ಎಚ್ಚರ

ಹಲ್ಲು ನೋವು ಬಂದ್ರೆ ಅದರಂತಹ ಯಮಹಿಂಸೆ ಮತ್ತೊಂದಿಲ್ಲ.. ಹೆಚ್ಚಿನ ಬಾರಿ ಹಲ್ಲು ನೋವು ರಾತ್ರಿ ವೇಳೆಯೇ ಕಾಣಿಸುಕೊಳ್ಳುತ್ತದೆ. ಎರಡು ಮೂರು ದಿನವಾದರೂ ಹಲ್ಲು ನೋವು ಕಡಿಮೆ ಆಗುವುದೇ ಇಲ್ಲ. ಹುಳುಕು ಹಲ್ಲುಗಳನ್ನ ತೆಗೆದರೂ ನೋವು ಇದ್ದೇ ಇರುತ್ತದೆ.  ಹಲ್ಲು ನೋವನ್ನ ಕಡೆಗಣಿಸಿದರೆ ಮುಂದೆ ಅದು ಇನ್ನಷ್ಟು ಸಮಸ್ಯೆ ಕಾಣಸಿಕೊಳ್ಳಬಹುದು. ಕೂಡಲೇ ದಂತವೈದ್ಯರನ್ನ ಭೇಟಿ ಮಾಡಿ ಚಿಕಿತ್ಸೆ ಪಡೆಯುವುದೇ ಉತ್ತಮ

ಈ ಕೆಳಕಂಡ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡೆ ಕೂಡಲೇ ದಂತ ವೈದ್ಯರನ್ನ ಭೇಟಿ ಆಗಿ

ವಸಡಿನಲ್ಲಿ ರಕ್ತ

ಹಲ್ಲುಜ್ಜುವ ವೇಳೆ ವಸಡಿನಲ್ಲಿ ರಕ್ತ ಬಂದರೆ, ಅಥವಾ ಪದೇ ಪದೇ ಇರು ಪುನರಾವರ್ತನೆ ಆಗುತ್ತಿದ್ದರೆ ನಿರ್ಲಕ್ಷ್ಯ ವಹಿಸಬೇಡಿ. ವಸಡಿನಲ್ಲಿ ರಕ್ತ ಕಾಣಿಸಿಕೊಳ್ಳುವುದು ನಿಮ್ಮ ವಸಡಿ ಶಕ್ತಿ ಕಳೆದುಕೊಳ್ಳುತ್ತಿದೆ ಎಂತಲೇ ಅರ್ಥ.. ಇದನ್ನ ನಿರ್ಲಕ್ಷಿಸಿದರೆ ನಿಮ್ಮ ಹಲ್ಲುಗಳು ಬೇಗನೇ ಹಾಳಾಗುತ್ತವೆ. ಚಿಕ್ಕವಯಸ್ಸಿನಲ್ಲೇ ಹಲ್ಲು ಉದುರುವ ಸಾಧ್ಯತೆಯೂ ಹೆಚ್ಚು. ಹೀಗಾಗಿ ವಸಡಿನಲ್ಲಿ ರಕ್ತ ಬರುತ್ತಿದ್ದರೆ ಒಮ್ಮೆ ವೈದ್ಯರನ್ನ ಭೇಟಿಯಾಗಿ ಅವರ ಸೂಚನೆ ಪಡೆಯುವುದು ಉತ್ತಮ

ವಸಡುಗಳ ಸವೆಯುವಿಕೆ

ವಸಡುಗಳು ವಯಸ್ಸಾಗುತ್ತಾ ಸವೆಯಲು ಶುರುವಾಗುತ್ತವೆ. ಆದರೆ 30 ದಾಟಿದವರಲ್ಲಿ ಈ ಸಮಸ್ಯೆ ಕಂಡುಬಂದರೆ ವೈದ್ಯರನ್ನ ಕಾಣಿ. ಹಲ್ಲಿನ ಬುಡದಲ್ಲಿ ವಸಡಿ ಸ್ವಲ್ಪವೇ ಸವೆದಂತೆ ಕಾಣಿಸುತ್ತದೆ. ಇದನ್ನ ನಿರ್ಲಕ್ಷಿಸಿದರೆ ವಸಡು ಬಲಹೀನವಾಗಿ ಹಲ್ಲುಗಳು ಬಿದ್ದುಹೋಗುತ್ತವೆ

ಒಣಗಿದ ಬಾಯಿ

ಬಾಯಿ ಪದೇ ಪದೇ ಒಣಗಿದಂತಾಗುವುದು ಕೂಡ ದಂತ ಸಮಸ್ಯೆ ಲಕ್ಷಣ. ಬಾಯಲಲಿ ಎಂಜಲು ಬರುತ್ತಿದ್ದರೆ ತಿಂದ ಆಹಾರ ಹಲ್ಲಿನಲ್ಲಿ ಕಚ್ಚಿಕೊಳ್ಳುವುದಿಲ್ಲ. ಆದರೆ ಬಾಯಿ ಒಣಗಿದಾಗ ಹಲ್ಲಿಗೆ ಆಹಾರ ಅಂಟಿಕೊಳ್ಳುತ್ತದೆ. ಇದು ಹಲ್ಲು ಹಾಳಾಗಲು ಕಾರಣವಾಗುತ್ತದೆ

ಅಲುಗಾಡುವ ಹಲ್ಲುಗಳು

ವಯಸ್ಸು 60 ದಾಟಿದ್ದರೂ ಗಟ್ಟಿಮುಟ್ಟಾದ ಹಲ್ಲು ಅಲುಗಾಡುವುದಿಲ್ಲ. ಆದರೆ 40-35 ವರ್ಷಕ್ಕ ಹಲ್ಲು ಅಲುಗಾಡುತ್ತಿದೆ ಎಂದರೆ ನಿಮ್ಮ ಹಲ್ಲು ಶೀಘ್ರದಲ್ಲೇ ಬೀಳಲಿದೆ ಎಂದರ್ಥ. ಹಲ್ಲುಗಳು ಅಲುಗಾಡುತ್ತಿದ್ದರೆ ಗಟ್ಟಿ ಆಹಾರ ಪದಾರ್ಥಗಳನ್ನ ಕಚ್ಚಿ ತಿಂದರೆ ಮುರಿದು ಬೀಳುವ ಸಾಧ್ಯತೆ ಇದೆ. ಹೀಗಾಗಿ ದಂತ ವೈದ್ಯರನ್ನ ಈ ಕೂಡಲೇ ಭೇಟಿ ಆಗಿ

ದವಡೆಯಲ್ಲಿ ಊತ/ಬಾಯಿ ಹುಣ್ಣು.

ದವಡೆಯಲ್ಲಿ ಹುಣ್ಣು ಕಂಡುಬಂದರೆ ವೈದ್ಯರಿಗೆ ಒಮ್ಮೆ ತೋರಿಸಿ. ವಾರಗಳು ಕಳೆದರೂ ದವಡೆಯ ಊತ ಅಥವಾ ಹುಣ್ಣು ಕಡಿಮೆ ಆಗಿಲ್ಲ ಎಂದರೆ ಚಿಕಿತ್ಸೆಯ ಅಗತ್ಯತೆ ಇರುತ್ತದೆ.

ಪದೇ ಪದೇ ಹಲ್ಲು ನೋವು

ಪದೇ ಪದೇ ನಿಮಗೆ ಹಲ್ಲು ನೋವು ಕಾಡುತ್ತಿದ್ದರೆ ಯಾವುದೇ ಕಾರಣಕ್ಕು ಉಪೇಕ್ಷಿಸಬೇಡಿ. ಹಲ್ಲು ಹಾಗೂ ವಸಡು ತುಂಬಾ ಸೂಕ್ಷ್ಮವಾದವು. ಯದ್ವಾತದ್ವಾ ಬ್ರಶ್​ ಮಾಡುವುದು, ಬ್ರಶ್ ಮಾಡದೆಯೇ ಇರುವುದು, ಅಥವಾ ಗಟ್ಟಿ ಆಹಾರ ಜಗಿದಾಗ ಹಲ್ಲು ನೋವು ಕಾಣಿಸಿಕೊಳ್ಳಬಹುದು. ಇದಕ್ಕೆ ಪರಿಹಾರ ಏನು ಅನ್ನೋದನ್ನ ವೈದ್ಯರು ಸೂಚಿಸುತ್ತಾರೆ. ಅವರ ಸಲಹೆ ಪಡೆಯಿರಿ

ಬಾಯಿ ದುರ್ವಾಸನೆ

ಬೀಡಿ, ಸಿಗರೇಟ್​, ತಂಬಾಕು ಅಭ್ಯಾಸವಿದ್ದವರ ಬಾಯಿ ಅತಿ ಹೆಚ್ಚು ದುರ್ವಾಸನೆ ಬೀರುತ್ತದೆ. ಅಲ್ದೇ ಹಲ್ಲುಗಳು ಕಪ್ಪಗಾಗುತ್ತಿರುತ್ತವೆ. ಇಂಥಾ ಹಲ್ಲುಗಳನ್ನ ಬ್ಲೀಚಿಂಗ್ ಮಾಡಿಸಬೇಕಿರುತ್ತವೆ. ಹೀಗಾಗಿ ಕೂಡಲೇ ವೈದ್ಯರನ್ನ ಕಾಣುವುದು. ಅಲ್ಲದೇ ಹುಳುಕು ಹಲ್ಲು ಇದ್ದರೆ, ಹಲ್ಲು ಜೋಡಣೆ ಆಗಿದ್ದರೆ, ಬಾಯಿ ಸ್ವಚ್ಚ ಮಾಡದೇ ಇದ್ದರೆ ಹೆಚ್ಚು ದುರ್ವಾಸನೆ ಬೀರುತ್ತೆ. ಇದರಿಂದ ಅಕ್ಕಪಕ್ಕದವರಿಗೂ ಅಸಹ್ಯವೆನಿಸುತ್ತದೆ. ಹೀಗಾಗಿ ಕೂಡಲೇ ವೈದ್ಯರನ್ನ ಭೇಟಿ ಆಗಿ ಅವರು ನೀಡುವ ಮೌತ್​ವಾಶ್ ಬಳಸುವುದು

ಬಾಯಿ ಶುಚಿಯಾಗಿರಲು ನೀವೂ ಹೀಗೆ ಮಾಡಿ

  • ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜಿ. ರಾತ್ರಿ ಮಲಗುವ ಮುನ್ನ ಹಲ್ಲು ಉಜ್ಜಿ
  • ಪ್ರತಿ ಬಾರಿ ಊಟದ ಬಳಿಕ ಅಥವಾ ಏನಾದರೂ ಆಹಾರ ತಿಂದ ಬಳಿಕ ಬಾಯಿ ಮುಕ್ಕಳಿಸುವುದನ್ನ ರೂಢಿಸಿಕೊಳ್ಳಿ
  • ಪ್ರತಿ ದಿನ ಟಂಗ್​ ಕ್ಲೀನರ್​ನಿಂದ ನಾಲಿಗೆಯನ್ನು ಶುಚಿಗೊಳಿಸಿಕೊಳ್ಳಿ
  • ಪ್ರತಿ ದಿನ ಮೌತ್​ ವಾಶ್​ ಬಳಸಿ ಬಾಯಿ ಮುಕ್ಕಳಿಸಿ
  • ಬಿಸಿ ನೀರನ್ನು ಕುಡಿಯುವದರಿಂದಲೂ ಬಾಯಿ ಸ್ವಚ್ಚವಾಗಿರುತ್ತದೆ
  • ಆಗಾಗ್ಗೆ ಪುದೀನಾ, ತುಳಸಿ ಎಲೆ, ಲವಂಗ, ಏಲಕ್ಕಿ ಕಾಳನ್ನು ಬಾಯಿಗೆ ಹಾಕಿಕೊಳ್ಳುವುದರಿಂದ ದುರ್ವಾಸನೆ ದೂರವಾಗುತ್ತದೆ.

ಈ ಆರೋಗ್ಯಕರ ಮಾಹಿತಿ ನಿಮಗೆ ಇಷ್ಟ ಆಗಿದ್ರೆ ಈ ಕೂಡ್ಲೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.. ಆರೋಗ್ಯದ ಬಗ್ಗೆ ಮಾಹಿತಿಗಾಗಿ pratikshana.com ನೋಡುತ್ತಿರಿ.

LEAVE A REPLY

Please enter your comment!
Please enter your name here