ದೆಹಲಿ ಕೇಂದ್ರಾಡಳಿತ ಪ್ರದೇಶದ ಕೇಮದ್ರದ ಪ್ರತಿನಿಧಿ ಲೆ.ಗವರ್ನರ್ ‘ಅನಿಲ್ ಬೈಜಾಲ್’ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
2016 ರ ರಲ್ಲಿ ದೆಹಲಿ ಲೆ.ಗವರ್ನರ್ ಆಗಿದ್ದ ನಜೀಬ್ ಸಿಂಗ್ ಅವರು ಹಠಾತ್ ರಾಜೀನಾಮ ನೀಡಿದ್ದರು. ಅವರ ಸ್ಥಾನಕ್ಕೆ ನಿವೃತ್ತ ನಾಗರೀಕ ಸೇವೆಯ ಅಧಿಕಾರಿ ಅನಿಲ್ ಬೈಜಾಲ್ ಅವರನ್ನು ನೇಮಕ ಮಾಡಲಾಗಿತ್ತು. ಇವರ 5 ವರ್ಷಗಳ ಸೇವಾ ಅವಧಿ ಮುಕ್ತಾಯವಾಗಿದ್ದು, ನೂತನ ಲೆ.ಗವರ್ನರ್ ನೇಮಕಾತಿ ಬಾಕಿ ಉಳಿದಿತ್ತು.
ದೆಹಲಿ ಲೆ.ಗವರ್ನರ್ ಪಾತ್ರವು ಕೇಂದ್ರದ ಬಿಜೆಪಿ ಆಡಳಿತ ಹಾಗೂ ಆಮ್ ಆದ್ಮಿ ಪಕ್ಷದ ನಡುವಿನ ತಿಕ್ಕಾಟದಲ್ಲಿ ಸಿಲುಕಿ ನಲುಗಿ ಹೋಹಿತ್ತು. 2018 ರಲ್ಲಿ ಸುಪ್ರಿಂಕೋರ್ಟ್ ರಾಜ್ಯ ಹಾಗೂ ಕೇಂದ್ರದ ಅಧಿಕಾರಗಳ ಬಗ್ಗೆ ಸ್ಪಷ್ಟವಾಗಿ ಹೇಳಿದ ನಂತರ ಈ ಆಡಳಿತದ ತಿಕ್ಕಾಟಕ್ಕೆ ಇತ್ತಿಶ್ರೀ ಬಿದ್ದಿತ್ತು.
ಲೆ.ಗವರ್ನರ್ ಅವರಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ. ನಿಜವಾದ ಅಧಿಕಾರ ಚುನಾಯಿತ ಸರ್ಕಾರಕ್ಕೆ ಇರಬೇಕು ಎಂಬ ಅರವಿಂದ್ ಕೇಜ್ರಿವಾಲ್ ಅವರ ವಾದಕ್ಕೆ ಸುಪ್ರೀಂಕೋರ್ಟ್ ಅಸ್ತು ಎಂದಿತ್ತು. ಭೂಮಿ, ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಅಧಿಕಾರವನ್ನು ಹೊರತು ಪಡಿಸಿ ದೆಹಲಿ ಲೆ.ಗವರ್ನರ್ ಸ್ವತಂತ್ರ ಅಧಿಕಾರ ಹೊಂದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿತ್ತು.
1969 ರ ಬ್ಯಾಚ್ನ ಐಎಎಸ್ ಅಧಿಕಾರಿ ಅನಿಲ್ ಬೈಜಾಲ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಕಾಲಾವಧಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅಡಿಯಲ್ಲಿ, ಇವರು 60,000 ಕೋಟಿ ರೂ. ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ ಅನ್ನು ಮೇಲ್ವಿಚಾರಣೆ ಮಾಡಿದ್ದರು.