ಥರ್ಟಿ ಇಯರ್ಸ್ ಗೀತಾಂಜಲಿ ಅಯ್ಯರ್.. ಡಿಡಿ ನ್ಯೂಸ್ ರೀಡರ್ ಇನ್ನಿಲ್ಲ

ಗೀತಾಂಜಲಿ ಅಯ್ಯರ್.. 30 ವರ್ಷ ದೂರದರ್ಶನದಲ್ಲಿ ಕೆಲಸ ಮಾಡಿದ ನ್ಯೂಸ್ ರೀಡರ್ ಇನ್ನಿಲ್ಲ. ಬುಧವಾರ ಅವರು ಇಹಲೋಕ ತ್ಯಜಿಸಿದ್ದಾರೆ.

ಪಾರ್ಕಿನ್ಸನ್ ಖಾಯಿಲೆಯಿಂದ ಬಳಲುತ್ತಿದ್ದ ಅವರು, ವಾಕ್​ಗೆ ಹೋಗಿ ಬಂದ ಸ್ವಲ್ಪ ಹೊತ್ತಿನ ನಂತರ ಕುಸಿದು ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

1971ರಲ್ಲಿ ಡಿಡಿಯಲ್ಲಿ ನ್ಯೂಸ್ ಪ್ರೆಸೆಂಟರ್ ಆಗಿ ಕೆಲಸಕ್ಕೆ ಸೇರಿದ ಅವರು ಇಂಗ್ಲೀಷ್‌ನಲ್ಲಿ ನ್ಯೂಸ್ ಓದಿದ ಪ್ರಥಮ ಪ್ರೆಸೆಂಟರ್ ಕೂಡ ಆಗಿದ್ದಾರೆ.

ಇಂಡಿಯಾ ನ್ಯೂಸ್​ ಹೆಸರಿನ ನ್ಯಾಷನಲ್ ಬುಲೆಟಿನ್ ಮೂಲಕ ದೇಶಾದ್ಯಂತ ಗೀತಾಂಜಲಿ ಅಯ್ಯರ್ ಜನಪ್ರಿಯರಾಗಿದ್ದರು. ಮನೆ ಮಾತಾಗಿದ್ದರು.

ನಾಲ್ಕು ಬಾರಿ ಉತ್ತಮ ಆಂಕರ್ ಪ್ರಶಸ್ತಿಗೆ ಭಾಜನರಾಗಿದ್ದರು. ಮಾಧ್ಯಮರಂಗದಲ್ಲಿ ಸಲ್ಲಿಸಿದ ಅನುಪಮಾ ಸೇವೆಗಾಗಿ 1989ರಲ್ಲಿ ಔಟ್‌ಸ್ಟಾಂಡಿಂಗ್ ವಿಮೆನ್ ಪ್ರಶಸ್ತಿಯಾಗಿ ಇಂದಿರಾ ಪ್ರಿಯದರ್ಶಿನಿ ಅವಾರ್ಡ್ ಪಡೆದುಕೊಂಡಿದ್ದರು.

ಗೀತಾಂಜಲಿ ಅಯ್ಯರ್.. ಕೊಲ್ಕೊತಾ ಮೂಲದವರು.. ದೂರದರ್ಶನದಲ್ಲಿ ವೃತ್ತಿಜೀವನ ಮುಗಿಸಿದ ಬಳಿಕ ಅವರು ಕಾರ್ಪೋರೇಟ್ ಲೋಕದಲ್ಲಿ ಸದ್ದು ಮಾಡಿದ್ದರು. ಖಾಂದಾನ್ ಎಂಬ ಸೀರಿಯಲ್‌ನಲ್ಲಿ ಕೊನೆಯದಾಗಿ ನಟಿಸಿದ್ದರು.

ಮೃತರು ಪುತ್ರ ಶೇಖರ್ ಮತ್ತು ಪುತ್ರಿ ಪಲ್ಲವಿ ಅವರನ್ನು ಅಗಲಿದ್ದಾರೆ. ಪುತ್ರಿ ಪಲ್ಲವಿ ವೃತ್ತಿಯಲ್ಲಿ ಪತ್ರಕರ್ತೆಯಾಗಿದ್ದಾರೆ.