ಬೆಂಗಳೂರು ಪ್ರತಿಭಟನೆ ಕೂಲ್ ಆಗಿ ನಡೆದಿದ್ದು ಏಕೆ ಗೊತ್ತಾ..?

ಸಾಮಾನ್ಯವಾಗಿ ಎಲ್ಲಿಯೇ ಪ್ರತಿಭಟನೆಗಳು ನಡೆದರೂ ಪೊಲೀಸರು ಬಲ ಪ್ರಯೋಗ ಮಾಡುತ್ತಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸುತ್ತಾರೆ. ಆದರೆ ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ನಿನ್ನೆ ನಡೆದಿದ್ದು ಬೇರೆ. ಪೊಲೀಸರು ಎಷ್ಟು ಬಾರಿ ಎಚ್ಚರಿಕೆ ನೀಡಿದರೂ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರು ಜಾಗ ಖಾಲಿ ಮಾಡಲಿಲ್ಲ.

ಹೀಗಾಗಿ ಬೆಂಗಳೂರು ಸೆಂಟ್ರಲ್ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಪ್ರತಿಭಟನೆ ತಡೆಯಲು ವಿಭಿನ್ನ ಅಸ್ತ್ರ ಪ್ರಯೋಗಿಸಿದರು. ಅದುವೇ ಜನಗಣಗಮನ.

ಪ್ರತಿಭಟನಾಕಾರರಲ್ಲಿ ಶಾಂತಿ ಸೌಹಾರ್ದತೆಯ ಅರಿವು ಮೂಡಿಸಲು ಚೇತನ್ ಸಿಂಗ್ ರಾಥೋಡ್ ರಾಷ್ಟ್ರಗೀತೆ ಹಾಡಿದರು. ಕೂಡಲೇ ಪ್ರತಿಭಟನಾಕಾರರು ದನಿ ಗೂಡಿಸಿದರು.

ರಾಷ್ಟ್ರಗೀತೆ ಹಾಡಿದ ಬಳಿಕ ಪ್ರತಿಭಟನಾಕಾರರು ತಾವಾಗಿಯೇ ಟೌನ್‍ಹಾಲ್ ಮುಂಭಾಗದಿಂದ ಜಾಗ ಖಾಲಿ ಮಾಡಿದರು.

ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚೇತನ್ ಸಿಂಗ್ ರಾಥೋಡ್ ನಡೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ

LEAVE A REPLY

Please enter your comment!
Please enter your name here