ಜೈನ ಮುನಿ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ -ಅಮರಣಾಂತ ಸತ್ಯಾಗ್ರಹ ಕೈಬಿಡಿ – ಜೈನಮುನಿಗಳಿಗೆ DCM ಡಿಕೆಶಿ ಮನವಿ

ಹಣಕಾಸು ವೈಷ್ಯಮ್ಯಕ್ಕೆ ಆಪ್ತ ನಾರಾಯಣ ಮಾಳಿಯಿಂದಲೇ ಕೊಲೆಯಾಗಿರುವ ಜೈನ ಮುನಿ (Jain Monk) ಕಾಮಕುಮಾರ ನಂದಿ ಮಹಾರಾಜರ (Kamakumara Nandi Maharaja) ಹತ್ಯೆಗೆ ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ (KPCC) ಅಧ್ಯಕ್ಷ ಡಿ ಕೆ ಶಿವಕುಮಾರ್​ (DCM D K Shivakumar) ಆಘಾತ ವ್ಯಕ್ತಪಡಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಹೇಳಿದ್ದೇನು..?

ಜೈನ ಮುನಿಗಳಾದ ಕಾಮಕುಮಾರ ನಂದಿ ಮಹಾರಾಜರ ಅಮಾನುಷ ಹತ್ಯೆಯ ಪ್ರಕರಣದಿಂದ ತೀವ್ರ ಆಘಾತವಾಗಿದೆ.

ಶಾಂತಿ, ಅಹಿಂಸೆಯ ಪ್ರತಿಪಾದಕರಾಗಿದ್ದ ಅವರನ್ನು ಭೀಕರವಾಗಿ ಹತ್ಯೆಗೈದವರಿಗೆ ಕಠಿಣ ಶಿಕ್ಷೆಯಾಗಬೇಕು. ಪೊಲೀಸರು ಈ ಪ್ರಕರಣವನ್ನು ಸಮರ್ಥವಾಗಿ ಬೇಧಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನು ಕಲೆಹಾಕಿ, ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.

ಅತೀವ ನೋವಿನಲ್ಲಿರುವ ಅವರ ಭಕ್ತವೃಂದಕ್ಕೆ ನನ್ನ ಸಂತಾಪಗಳು. ಭಕ್ತರು ಶಾಂತಿ ಕಾಪಾಡಿಕೊಳ್ಳಬೇಕು. ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು.

ಈ ಹತ್ಯೆ ಖಂಡಿಸಿ, ಜೈನ ಮುನಿಗಳಿಗೆ ರಕ್ಷಣೆ ಕೋರಿ ವರೂರು ಶ್ರೀ ಗುಣಾಧರನಂದಿ ಮಹಾರಾಜ ಸ್ವಾಮೀಜಿಗಳು ಅನ್ನ ನೀರು ತ್ಯಜಿಸಿ ನಡೆಸುತ್ತಿರುವ ಅಮರಣಾಂತ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ಮನವಿ ಮಾಡುತ್ತೇನೆ. ಧರ್ಮ ರಕ್ಷಕರ ರಕ್ಷಣೆಗೆ ಸರಕಾರ ಬದ್ಧವಾಗಿದೆ.

ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here