ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಜನರು ಇತರೆ ಆರ್ಥಿಕ ದುರ್ಬಲ ವರ್ಗದವರು ಸಣ್ಣ ಕೈಗಾರಿಕೆ ಆರಂಭಿಸಿ ಸ್ವಾವಲಂಬಿಗಳನ್ನಾಗಿಸಲು ರಾಜ್ಯ ಸರ್ಕಾರ ನೂತನ ಯೋಜನೆಯೊಂದನ್ನು ಘೋಷಿಸಿದೆ.
ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಜನರು ಇತರೆ ಆರ್ಥಿಕ ದುರ್ಬಲ ವರ್ಗದವರು ಸಣ್ಣ ಕೈಗಾರಿಕೆಗಳನ್ನು ಆರಂಭಿಸುವುದಾದರೆ ಎರಡು ಎಕರೆ ಭೂಮಿ ಖರೀದಿಸಲು ಶೇ. 75% ಸಬ್ಸಿಡಿ ನೀಡಲು ಮುಂದಾಗಿದೆ. ಅಲ್ಲದೇ, ಉಳಿದ ಶೇ.25 ರಷ್ಟು ಕಂತಿನ ಮೇರೆಗೆ ಆರ್ಥಿಕ ಸಹಾಯ ಒದಗಿಸಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.