ದಕ್ಷಿಣ ಕನ್ನಡ ಜಿಲ್ಲೆಯ BJP ಮುಖಂಡನಿಗೆ ಹನಿ ಟ್ರ್ಯಾಪ್ – ಮಹಿಳೆ ಬಂಧನ

Vishwanath Shetty

ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡ ಹಾಗೂ ಚಿನ್ನದ ವ್ಯಾಪಾರಿ ಜಗನ್ನಾಥ ಶೆಟ್ಟಿ (Vishwanath Shetty) ಹನಿಟ್ರ್ಯಾಪ್ ಗೆ​ ಒಳಗಾಗಿರುವ ಪ್ರಕರಣ ತಡವಾಗಿ ವರದಿಯಾಗಿದೆ.

ಪ್ರತಿಷ್ಠಿತ ಚಿನ್ನದ ವ್ಯಾಪಾರಿಯಾಗಿರುವ ಜಗನ್ನಾಥ ಶೆಟ್ಟಿ(Vishwanath Shetty) ಯವರು ಕಳೆದ 6 ತಿಂಗಳ ಹಿಂದೆಯೇ ಹನಿಟ್ರ್ಯಾಪ್​ಗೆ ಒಳಗಾಗಿ 50 ಲಕ್ಷ ಕಳೆದುಕೊಂಡಿದ್ದಾರೆ ಎಂದು ತಿಳಿದಬಂದಿದೆ.

ದಕ್ಷಿಣ ಕನ್ನಡದ ಪ್ರಭಾವಿ ಬಿಜೆಪಿ ಮುಖಂಡರಾಗಿರುವ ಜಗನ್ನಾಥ ಶೆಟ್ಟಿ(Vishwanath Shetty) ಯವರು ಮಂಡ್ಯದಲ್ಲಿರುವ ಪ್ರತಿಷ್ಠಿತ ಶ್ರೀನಿಧಿ ಗೋಲ್ಡ್ ಚಿನ್ನದ ಅಂಗಡಿಯ ಮಾಲೀಕರಾಗಿದ್ದಾರೆ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಜಗನ್ನಾಥ್ ಅವರು ದೂರು ದಾಖಲಿಸಿದ್ದು, ಈ ಸಂಬಂಧ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.

ಹನಿಟ್ರ್ಯಾಪ್ ನಡೆದಿದ್ದು ಹೇಗೆ..?

ಜಗನ್ನಾಥ ಶೆಟ್ಟಿಯವರು ಕಳೆದ ಫೆಬ್ರವರಿ 26 ರಂದು ಮಂಡ್ಯದಲ್ಲಿ ಮಂಗಳೂರಿಗೆ ತೆರಳಲು ಬಸ್ಸಿಗಾಗಿ ಕಾದು ಕುಳಿತಿದ್ದರು. ಮೈಸೂರಿಗೆ ಡ್ರಾಪ್ ಕೊಡೋದಾಗಿ ನಾಲ್ವರು ಇವರನ್ನು ಕಾರಿಗೆ ಹತ್ತಿಸಿಕೊಂಡಿದ್ದರು. ಗೋಲ್ಡ್​ ಬಿಸ್ಕೆಟ್ ಅಸಲಿಯತ್ತು ಪರೀಕ್ಷೆಗೆ ಹೋದಾಗ ಆರೋಪಿಗಳು ಬ್ಲಾಕ್ ಮೇಲೆ ಮಾಡಿದ್ದಾರೆ.

ಇದನ್ನೂ ಓದಿ : BIG BREAKING: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಬಂಧ – ಮತ್ತೆ 2 ದಿನ ವಿಸ್ತರಣೆ

ಮೈಸೂರಿನ ಲಾಡ್ಜ್​ವೊಂದಕ್ಕೆ ಕರೆದೊಯ್ದಿದ್ದ ಆರೋಪಿಗಳು ಹನಿಟ್ರ್ಯಾಪ್ ಮಾಡಿದ್ದಾರೆ. ಲಾಡ್ಜ್​ ಕರೆದೊಯ್ಯುತ್ತಿದ್ದಂತೆಯೇ ಯುವತಿ ಜೊತೆಗೆ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಈ ವಿಡಿಯೋ ಮಾಡುತ್ತಲೇ ಆರೋಪಿಗಳು 4 ಕೋ.ರೂಗೆ ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ ವಿಶ್ವನಾಥ ಶೆಟ್ಟರು 50 ಲಕ್ಷ ನೀಡಿ ಬಿಡಿಸಿಕೊಂಡಿದ್ದರು. ಇದೀಗ, ಆರೋಪಿಗಳು ಮತ್ತೆ ಹಣಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here