BIG BREAKING: ಅಪಘಾತದಲ್ಲಿ TATA Sons ಮಾಜಿ ಮುಖ್ಯಸ್ಥ, ಉದ್ಯಮಿ ಸೈರಸ್​ ಮಿಸ್ತ್ರಿ ಸಾವು

Cyrus-Mistry
Tata Sons Former Chairman Cyrus Mistry
ಟಾಟಾ ಸನ್ಸ್​​ ಕಂಪನಿಗಳ ಮಾಜಿ ಮುಖ್ಯಸ್ಥರಾಗಿದ್ದ ಸೈರಸ್​ ಮಿಸ್ತ್ರಿ (Cyrus Mistry) ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮುಂಬೈನಲ್ಲಿ ಘಟಿಸಿದ ಅಪಘಾತದಲ್ಲಿ ಉದ್ಯಮಿ ಸೈರಸ್​ ಮಿಸ್ತ್ರಿ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಇವರು ಅಹಮದಾಬಾದ್​ನಿಂದ ಮುಂಬೈಗೆ ಹೋಗುತ್ತಿದ್ದರು.
54 ವರ್ಷದ ಇವರು 2012ರಿಂದ 2016ರವರೆಗೆ ಟಾಟಾ ಸನ್ಸ್​ ಮುಖ್ಯಸ್ಥರಾಗಿದ್ದರು. ಆ ಬಳಿಕ ವಿವಾದದ ಕಾರಣದಿಂದ ಇವರನ್ನು ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಲಾಗಿತ್ತು.
ಮಿಸ್ತ್ರಿ ಅವರು ತಮ್ಮ ಕುಟುಂಬದ ಕಂಪನಿ ಶಾಪೂರ್ಜಿ ಪಲ್ಲೋನ್ಜಿ ಕಂಪನಿಯ ಮುಖ್ಯಸ್ಥರು. ಕಟ್ಟಡ ನಿರ್ಮಾಣ, ಜವಳಿ, ಗೃಹೋಪಯೋಗಿ ಉಪಕರಣದಿಂದ 9ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಮುಖ ಕಂಪನಿ ಆಗಿದೆ. ಈ ಕಂಪನಿಯ ಮೌಲ್ಯ 2.5 ಬಿಲಿಯನ್​ ಅಮೆರಿಕನ್​ ಡಾಲರ್​.

LEAVE A REPLY

Please enter your comment!
Please enter your name here