ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಕ್ವಾಲಿಫೈಯರ‍್ಸ್-2023ನಲ್ಲಿ ಜಿಂಬಾಬ್ವೆ ಭಾರೀ ಗೆಲುವು ಸಾಧಿಸಿದೆ. ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕಾ ತಂಡವನ್ನು ಬರೋಬ್ಬರಿ 304 ರನ್‌ಗಳ ಅಂತರದಿಂದ ಹೀನಾಯವಾಗಿ ಸೋಲಿಸಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್‌ಗಳ ಅಂತರದಲ್ಲಿ ಗೆದ್ದ ತಂಡಗಳ ಪೈಕಿ ಟೀಂ ಇಂಡಿಯಾ ನಂತರದ ಸ್ಥಾನದಲ್ಲಿ ಜಿಂಬಾಬ್ವೆ ನಿಂತಿದೆ.
ಈಗಾಗಲೇ ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆದಿರುವ ಜಿಂಬಾಬ್ವೆ ಇಂದು ನಾಮಮಾತ್ರದ ಪಂದ್ಯದಲ್ಲಿ ಅಮೆರಿಕಾವನ್ನು ಎದುರಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 408 ರನ್ ಪೇರಿಸಿತು. ಈ ಮೂಲಕ ಏಕದಿನದಲ್ಲಿ ಗರಿಷ್ಠ ಸ್ಕೋರ್ ನಮೂದಿಸಿತು.
ಕ್ಯಾಪ್ಟನ್ ಸೀನ್ ವಿಲಿಯಮ್ಸ್ 101 ಎಸೆತಗಳಲ್ಲಿ 21 ಫೋರ್, 5 ಸಿಕ್ಸರ್‌ಗಳೊಂದಿಗೆ ರನ್‌ಗಳ ಸುನಾಮಿ ಸೃಷ್ಟಿಸಿದರು. 174ರನ್ ಗಳಿಸಿದರು. ಓಪನರ್ ಗುಂಬಿ 78 ರನ್ ಗಳಿಸಿದರೇ, ಸಿಕಂದರ್ ರಾಜ 48 ರನ್, ರಿಯಾನ್ ಬರ‍್ಲ್ 47 ರನ್ ಗಳಿಸಿ ಮಿಂಚಿದರು.
ಭಾರೀ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಇಳಿದ ಕ್ರಿಕೆಟ್ ಶಿಶು ಅಮೆರಿಕಾ 105 ರನ್‌ಗಳಿಗೆ ಆಲೌಟ್ ಆಯಿತು. ಜಿಂಬಾಬ್ವೆ ಬೌಲರ್‌ಗಳ ಸಾಂಘಿಕ ಹೋರಾಟ ಅಮೆರಿಕಾ ತಂಡ 25.01೧ ಓವರ್‌ಗಳಿಗೆಲ್ಲಾ ಗಂಟು ಮೂಟೆ ಕಟ್ಟಿತು.
ಯುಎಸ್‌ಎ ಬ್ಯಾಟರ್‌ಗಳ ಸ್ಕೋರ್.. 0,6,9,8,13,0,24,2,21,6,0… ಟಾಪ್ ಆರ್ಡರ್ ಕಂಪ್ಲೀಟ್ ಆಗಿ ವೈಫಲ್ಯವಾದ ಕಾರಣ ಅಮೆರಿಕಾ 304 ರನ್‌ಗಳ ಅಂತರದಿಂದ ಸೋಲುಂಡಿತು. ಕ್ಯಾಪ್ಟನ್ ಇನ್ಸಿಂಗ್ಸ್ ಆಡಿದ ಸೀನ್ ವಿಲಿಯಮ್ಸ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.
ಈ ಘನವಿಜಯದ ನಂತರ ಜಿಂಬಾಬ್ವೆ ಏಕದಿನದಲ್ಲಿ ಅತ್ಯಧಿಕ ರನ್‌ಗಳ ಅಂತರದಿಂದ ಎದುರಾಳಿಯನ್ನು ಸೋಲಿಸಿದ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಬಲಾಢ್ಯ ತಂಡಗಳನ್ನು ಹಿಂದಕ್ಕೆ ತಳ್ಳಿ ಟೀಂ ಇಂಡಿಯಾ ನಂತರದ ಸ್ಥಾನವನ್ನು ಆಕ್ರಮಿಸಿದೆ.
ಅತ್ಯಧಿಕ ರನ್‌ಗಳ ಅಂತರದ ಗೆಲುವಿನ ಪಟ್ಟಿ..
* 2023 – ತಿರುವನಂತಪುರದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ 317 ರನ್‌ಗಳ ಅಂತರದ ಗೆಲುವು
* 2023 – ಹರಾರೆಯಲ್ಲಿ ಅಮೆರಿಕಾ ವಿರುದ್ಧ ಜಿಂಬಾಬ್ವೆಗೆ 304 ರನ್‌ಗಳ ಅಂತರದ ಗೆಲುವು
* 2008 – ಅಬೆರ್ದಿನ್‌ನಲ್ಲಿ ಐರ‍್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ಗೆ 290 ರನ್‌ಗಳ ಅಂತರದ ಗೆಲುವು
* 2015 – ಪೆರ್ತ್‌ನಲ್ಲಿ ಆಫ್ಘಾನಿಸ್ತಾನದ ವಿರುದ್ಧ ಆಸ್ಟ್ರೇಲಿಯಾಗೆ 275 ರನ್‌ಗಳ ಅಂತರದ ಗೆಲುವು
* 2020 – ಬೆನೋನಿಯಲ್ಲಿ ಜಿಂಬಾಬ್ವೆ ವಿರುದ್ಧ ಸೌತ್ ಆಫ್ರಿಕಾಗೆ 272 ರನ್‌ಗಳ ಅಂತರ ಗೆಲುವು
ADVERTISEMENT
ADVERTISEMENT