BIG BREAKING: 2 ಸಾವಿರ ನೋಟು ವಾಪಸ್​ – ಬ್ಯಾಂಕ್​ಗೆ ವಾಪಸ್​ ಕೊಡಲು ಕಡೆಯ ದಿನ ನಿಗದಿ, ಬಳಿಕ ನಿಷೇಧ

ನಿಮ್ಮ ಬಳಿ 2 ಸಾವಿರ ರೂಪಾಯಿ ನೋಟುಗಳಿದ್ದರೆ ಈಗಲೇ ಕೊಟ್ಟು ಬಿಡಿ. ಹೌದು, 2 ಸಾವಿರ ರೂಪಾಯಿ ನೋಟನ್ನು ಹಣಕಾಸು ಚಲಾವಣೆಯಿಂದ ಹಿಂಪಡೆದು ಆರ್​ಬಿಐ ಇವತ್ತು ಮಹತ್ವದ ಸುತ್ತೋಲೆ ಹೊರಡಿಸಿದೆ.

ಆದರೆ 2 ಸಾವಿರ ರೂಪಾಯಿ ನೋಟು ನಿಷೇಧ ಆಗಲ್ಲ. ಆದರೆ ಸೆಪ್ಟೆಂಬರ್​ 30ರೊಳಗೆ 2 ಸಾವಿರ ರೂಪಾಯಿ ನೋಟನ್ನು ಬ್ಯಾಂಕ್​ಗೆ ಸಲ್ಲಿಕೆ ಮಾಡಬೇಕಾಗುತ್ತದೆ.

ಸೆಪ್ಟೆಂಬರ್​ 30ರ ಬಳಿಕ ನಿಷೇಧ:

ಸೆಪ್ಟೆಂಬರ್​ 30ರ ಬಳಿಕ 2 ಸಾವಿರ ರೂಪಾಯಿ ನೋಟಿಗೆ ಕಾನೂನು ಮಾನ್ಯತೆ ಇರಲ್ಲ ಅಂದರೆ ಆ ಬಳಿಕ 2 ಸಾವಿರ ನೋಟು ಬಳಕೆ ನಿಷೇಧವಾಗಿರಲಿದೆ. 

ಸಾರ್ವಜನಿಕರಿಗೆ ತಮ್ಮ ಬಳಿ ಇರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಬ್ಯಾಂಕ್​ಗಳಲ್ಲಿ ಠೇವಣಿ ಇಡುವುದಕ್ಕೆ ಸೆಪ್ಟೆಂಬರ್​ 30ರವರೆಗೆ ಮಾತ್ರ ಜಮೆ ಮಾಡಲು ಅವಕಾಶ ಇದೆ.

ಸ್ವಚ್ಛ ನೋಟು ನೀತಿಯಡಿಯಲ್ಲಿ ಆರ್​ಬಿಐ 2 ಸಾವಿರ ರೂಪಾಯಿ ನೋಟನ್ನು ವಾಪಸ್​ ಪಡೆದಿದೆ.  ಆರ್​ಬಿಐ ನೀಡಿರುವ ಮಾಹಿತಿ ಪ್ರಕಾರ 2018-19ರ ಆರ್ಥಿಕ ವರ್ಷದಿಂದಲೇ 2 ಸಾವಿರ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ.

ಆರ್​ಬಿಐ ಮಾಹಿತಿ ಪ್ರಕಾರ 2018ರ ಮಾರ್ಚ್​ 31ರ ವೇಳೆ 2 ಸಾವಿರ ರೂಪಾಯಿ ಮುಖಬೆಲೆ ನೋಟುಗಳ ಚಲಾವಣೆಯ ಒಟ್ಟು ಮೊತ್ತ – 6 ಲಕ್ಷದ 73 ಸಾವಿರ ಕೋಟಿ ರೂಪಾಯಿಯಷ್ಟು ಅಂದರೆ ಒಟ್ಟು ನಗದು ಚಲಾವಣೆಯಲ್ಲಿ (ಶೇಕಡಾ 31ರಷ್ಟು).

ಈಗ ಈ ನೋಟಿನ ಚಲಾವಣೆಯ ಪ್ರಮಾಣ ಮಾರ್ಚ್​ 31ರ ವೇಳೆಗೆ 3 ಲಕ್ಷದ 42 ಸಾವಿರ ಕೋಟಿ ರೂಪಾಯಿಯಷ್ಟಿದೆ.