CRPF – ಹುತಾತ್ಮ ಯೋಧನ ತಂಗಿ ಮದುವೆ  ಮಾಡಿದ ಯೋಧರು – ನಿಮಗೊಂದು ಸಲಾಮ್

ಹುತಾತ್ಮ ಯೋಧನ  ಸಹೋದರಿ ಮದುವೆಯನ್ನು CRPF ಯೋಧರು ಮುಂದೆ ನಿಂತು ನೆರವೇರಿಸಿದ ಅಪರೂಪದ  ಮತ್ತು ಹೃದಯಸ್ಪರ್ಶಿ ಘಟನೆ ಉತ್ತರ ಪ್ರದೇಶದ  ರಾಯ್ ಬರೆಲಿಯಲ್ಲಿ ನಡೆದಿದೆ.

2020ರ ಅಕ್ಟೋಬರ್ ನಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ  ಭಯೋತ್ಪಾದಕ ದಾಳಿಯಲ್ಲಿ CRPF ಯೋಧ ಶೈಲೆಂದ್ರ ಪ್ರತಾಪ್ ಸಿಂಗ್ ಹುತಾತ್ಮರಾಗಿದ್ದರು.

ತಮ್ಮ ಸಹೋದ್ಯೋಗಿ ಆಗಿದ್ದ ಹುತಾತ್ಮ ಶೈಲೆಂದ್ರ ಪ್ರತಾಪ್ ಸಿಂಗ್ ಅವರ  ಸಹೋದರಿ ಜ್ಯೋತಿಯ ಮದುವೆಯನ್ನು ಸೋಮವಾರ CRPF ಯೋಧರು ತಾವೇ ಮುಂದೆ ನಿಂತು ಮಾಡಿದ್ದಾರೆ.

ಅಣ್ಣನ ಸ್ಥಾನದಲ್ಲಿ ನಿಂತು ಎಲ್ಲಾ ಮದುವೆ  ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಮದುವೆ  ಮಂಟಪಕ್ಕೆ ಸಹೋದರಿ ಜ್ಯೋತಿಯನ್ನು ಸಾಂಪ್ರದಾಯದ ಪ್ರಕಾರ ಕರೆ ತಂದಿದ್ದಾರೆ.

ಅಣ್ಣನ ಸ್ಥಾನದಲ್ಲಿ ನಿಂತು ನವ ವಧು ಜ್ಯೋತಿಯನ್ನು ಆಶೀರ್ವದಿಸಿದ್ದಾರೆ. ಉಡುಗೊರೆ ನೀಡಿದ್ದಾರೆ. ಈ  ಮೂಲಕ  ಜ್ಯೋತಿ ಪಾಲಿಗೆ  ಅಣ್ಣನಿಲ್ಲದ ಕೊರತೆಯನ್ನು CRPF ಯೋಧರು ನೀಗಿಸಿದ್ದಾರೆ.

ಮದುವೆ  ಕಾರ್ಯಕ್ರಮದಲ್ಲಿ  ಭಾಗಿಯಾಗಿ CRPF ಯೋಧರು  ಮಾಡಿದ  ಕೆಲಸಗಳನ್ನು ನೋಡಿ ಮದುವೆಗೆ  ಬಂದವರೆಲ್ಲ ಭಾವುಕರಾದರು.

ನನ್ನ ಮಗ  ಈಗ  ಈ ಲೋಕದಲ್ಲಿ  ಇಲ್ಲ. ಆದರೆ, ಈಗ ನನಗೆ  ಹತ್ತಾರು ಮಕ್ಕಳು CRPF ಯೋಧರ ರೂಪದಲ್ಲಿ ಇದ್ದಾರೆ. ಅವರು ನಮ್ಮೆಲ್ಲಾ ಸುಖದುಃಖದಲ್ಲಿ ಭಾಗಿ ಆಗುತ್ತಾರೆ ಎಂದು ಶೈಲೆಂದ್ರ ಪ್ರತಾಪ್ ಸಿಂಗ್ ತಂದೆ ಆನಂದ  ಭಾಷ್ಪ ಸುರಿಸಿದ್ದಾರೆ.

LEAVE A REPLY

Please enter your comment!
Please enter your name here