ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ತಿರಂಗ ಮೆರವಣಿ್ಗೆ ವೇಳೆ ಹಸುವೊಂದು ಗುಜರಾತ್ನ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರಿಗೆ ಗುದ್ದಿದೆ.
ಮೆರವಣಿಗೆ ಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಹಸು ಗುದ್ದಿತು. ಜನಸಮೂಹದ ಮಧ್ಯದಲ್ಲಿದ್ದ ನಿತಿನ್ ಪಟೇಲ್ಗೆ ಅವರಿಗೆ ಹಸು ಡಿಕ್ಕಿ ಹೊಡೆಯಿತು.
ಹಸು ಅಪ್ಪಳಿಸಿದ ರಭಸಕ್ಕೆ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಸ್ಥಳದಲ್ಲೇ ಬಿದ್ದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಾಲಿಗೆ ಪೆಟ್ಟಾಗಿ ಪ್ರ್ಯಾಕ್ಚರ್ ಆಗಿದ್ದು 25 ದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ಖಾಸಗಿ ಆಸ್ಪತ್ರೆ ವೈದ್ಯರು ಸಲಹೆ ನೀಡಿದ್ದಾರೆ.
ಮೆಹಸಾನ ಜಿಲ್ಲೆಯ ಕಾಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ADVERTISEMENT
ADVERTISEMENT