ಬಾಹುಬಲಿಯ ಕಟ್ಟಪ್ಪನಿಗೆ ಆರೋಗ್ಯ ಸ್ಥಿತಿ ಗಂಭೀರ

ಬಾಹುಬಲಿ ಚಿತ್ರದ ಮೂಲಕ ಕಟ್ಟಪ್ಪ ಎಂದೇ ಪ್ರಸಿದ್ದರಾಗುರುವ ಸತ್ಯರಾಜ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ನಟ, ನಿರ್ಮಾಪಕ, ನಿರ್ದೇಶಕ, ಮಾಜಿ ರಾಜಕಾರಣಿಯಾಗಿ ಸತ್ಯರಾಜ್ ಗುರುತಿಸಿಕೊಂಡಿರುವ ಅವರು ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚಿನ ವರದಿಯ ಪ್ರಕಾರ, ಸತ್ಯರಾಜ್ ಅವರಿಗೆ ಇತ್ತೀಚೆಗಷ್ಟೇ ಕೊರೋನಾ ಸೋಂಕು ದೃಢಪಟ್ಟಿತ್ತು. ಆದರೆ, ನಿನ್ನೆ ರಾತ್ರಿ ಅವರ ಸ್ಥಿತಿ ಗಂಭೀರವಾದ ತಕ್ಷಣ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ವೈದ್ಯರ ತಂಡವು ಅವರಿಗೆ ನಿರಂತರ ಚಿಕಿತ್ಸೆ ನೀಡುತ್ತಿದೆ.

ಇತ್ತೀಚೆಗೆ ಸಂಗೀತ ಸಂಯೋಜಕ ತಮನ್, ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು, ಮಂಚು ಲಕ್ಷ್ಮಿ ಅವರಿಗೂ ಕೂಡ ಕೊರೋನಾ ಸೋಂಕು ದೃಢಪಟ್ಟಿದೆ.

ಸತ್ಯರಾಜ್ ಅವರು ನಿರ್ಮಾಣ ಹಂತದಲ್ಲಿರುವ ಎತರ್ಕ್ಕುಂ ತೂನಿಂಧವನ್, ಪಕ್ಕಾ ಕಮರ್ಷಿಯಲ್, ಪಾರ್ಟಿ ಮತ್ತು ಖಾಕಿ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿನ್ನೆ ಬಿಡುಗಡೆಯಾದ ರಾಣಾ ದಗ್ಗುಬಾಟಿ ಅಭಿನಯದ 1945 ಚಿತ್ರದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here