ತುಮಕೂರು ಜಿಲ್ಲೆಯ ಘಟಪ್ರಭಾದಲ್ಲಿ ಮಂಗಳವಾರ ರಾತ್ರಿ, ಬಾರ್ ನಲ್ಲಿ ನಕಲಿ ನೋಟು (Fake Notes) ಚಲಾಯಿಸಲು ಯತ್ನಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 500 ರೂ. ಮುಖಬೆಲೆಯ 473 ನಕಲಿ ನೋಟುಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಬಾರಿನಲ್ಲಿ ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡಿದ ಮೇಲೆ, ಮೂವರೂ ಬಾರಿನ ಮಂದ ಬೆಳಕಿನ ಲಾಭ ಪಡೆದು ನಕಲಿ ನೋಟುಗಳನ್ನು ನೀಡಿ ಬಾರ್ ಮಾಲೀಕರನ್ನು ಯಾಮಾರಿಸಲು ಯತ್ನಿಸಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ : ಗುಜರಾತ್ : ನಕಲಿ ಮದ್ಯ ಸೇವಿಸಿ 19 ಜನ ಸಾವು
ನಕಲಿ ನೋಟು (Fake Notes) ನೋಡಿದ ನಂತರ ಅನುಮಾನ ಬಂದ ಬಾರಿನ ವ್ಯಕ್ತಿ, ಅದನ್ನು ಲೈಟಿನ ಬೆಳಕಿಗೆ ಹಿಡಿದು ಪರಿಶೀಲಿಸಿದ್ದಾರೆ. ಅವರಿಗೆ ಈ ನೋಟುಗಳು ನಕಲಿ ಎಂಬ ಬಗ್ಗೆ ಅನುಮಾನ ದೃಢವಾಗಿದೆ. ಚಿಕ್ಕ ಮಕ್ಕಳು ಆಟವಾಡುವಾಗ ಬಳಸುವ ಹಣದ ಕಂತುಗಳನ್ನು ನೀಡಲು ಹೋಗಿದ್ದಾರೆ ಎಂದು ಗೊತ್ತಾಗಿದೆ. ನಂತರ ತಕ್ಷಣ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸರು ಬಂದು ಆರೋಪಿಗಳನ್ನು ಬಂಧಿಸಿ ನಕಲಿ ನೋಟುಗಳನ್ನು ವಶಪಡಿಸಿಕೊಂಡರು.
ಈ ಎಲ್ಲ ನೋಟುಗಳೂ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರಿಂಟ್ ಮಾಡಿದವು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಒದಿ : ಪ್ರತಿಷ್ಠಿತ ಆಸ್ಪತ್ರೆಗಳ ಹೆಸರಲ್ಲಿ ನಕಲಿ ದಾಖಲೆ ಸೃಷ್ಠಿಸಿ ಕಿಡ್ನಿ ಮಾರಾಟ ದಂಧೆ – ಇಬ್ಬರ ಬಂಧನ