ಕೊರೋನಾ ಹೆಚ್ಚಳ : ಮಾಸ್ಕ್ ಹಾಕದವರಿಗೆ 500 ರೂ. ದಂಡ – ಆದೇಶ

corona - Mask Compulsary

ಕೊರೋನಾ (Corona) ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಮಾಸ್ಕ್ ಹಾಕುವುದನ್ನು ಕಡ್ಡಾಯ(Mask Compulsary) ಮಾಡಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.

ದೆಹಲಿಯಲ್ಲಿ ಕೊರೋನಾCorona) ಸೋಂಕಿನ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮರಳಿ ಮಾಸ್ಕ್ ಹಾಕುವುದನ್ನು ಕಡ್ಡಾಯ(Mask Compulsary) ಮಾಡಿ ಆದೇಶಿಸಿದೆ.

ಮಾಸ್ಕ್/ಮುಖಗವಸು ಧರಸದೇ ಇರುವವರಿಗೆ 500 ರೂ. ದಂಡ ವಿಧಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ಮಾಡಿದ್ದಾರೆ.

ಇದನ್ನೂ ಓದಿ : Raksha Bandhana Festival : ತಂಗಿಯಿಂದ ರಾಕಿ ಕಟ್ಟಿಸಿಕೊಂಡ ‘ರಾಕಿಬಾಯ್’ 

ಮಾಸ್ಕ್ ಕಡ್ಡಾಯದ ಆದೇಶ ಕಾರು,ಅಟೋ,ಓಮಿನಿ ಮುಂತಾದ ನಾಲ್ಕು ಚಕ್ರದ ವಾಹನಗಳಲ್ಲಿ ಪ್ರಯಾಣಿಸುವವರಿಗೆ ವಿನಾಯಿತಿ ನೀಡಲಾಗಿದೆ.

ದೆಹಲಿಯಲ್ಲಿ ಅಗಸ್ಟ್​ ಆರಂಭದಿಂದ ಪ್ರತಿದಿನ 2,100 ರಂತೆ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ.

(ಯುವ ನಿರ್ಮಾಪಕ ಭರತ್ ನಟ ದರ್ಶನ್ ಮೇಲೆ ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ನಟ ಭರತ್ ಅವರೊಂದಿಗೆ ನಮ್ಮ ವಾಹಿನಿಯ ಸಂದರ್ಶನ)

LEAVE A REPLY

Please enter your comment!
Please enter your name here