ಪ್ರವಾದಿ ಮೊಹಮ್ಮದರ ಬಗ್ಗೆ ವಿವಾದಾತ್ಮಕ ಹೇಳಿಕೆ – ಬಿಜೆಪಿ ಶಾಸಕನಿಗೆ ಶೋಕಾಸ್ ನೋಟಿಸ್

T Rajasingh

ಪ್ರವಾದಿ ಮೊಹಮ್ಮದರ ( Prophet Mohamad ) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಶಾಸಕ ಟಿ ರಾಜಾಸಿಂಗ್​ (BJP MLA T Rajasingh) ಅವರಿಗೆ ಬಿಜೆಪಿ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಿದೆ.

ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಹೈದರಾಬಾದ್ (Hyderbad)​ ಪೊಲೀಸರು ಶಾಸಕ ರಾಜಾಸಿಂಗ್​ ಅವರನ್ನು ಇಂದು ಬೆಳಿಗ್ಗೆಯಷ್ಟೇ ಬಂಧಿಸಿದ್ದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ನಿಮ್ಮನ್ನು ಯಾಕೆ ಪಕ್ಷದಿಂದ ಉಚ್ಚಾಟನೆ ಮಾಡಬಾರದು ಎಂದು ಕಾರಣ ಕೇಳಿ ಶೋಖಾಸ್ ನೋಟಿಸ್ ಜಾರಿ ಮಾಡಿದೆ. ಈ ನೋಟಿಎಸ್​ಗೆ ಶಾಕ ಟಿ ರಾಜಾಸಿಂಗ್ 10 ದಿನಗಳ ಒಳಗಾಗಿ ಉತ್ತರಿಸಬೇಕಿದೆ.

ಇದನ್ನೂ ಓದಿ : ಪ್ರವಾದಿ ಮಹಮ್ಮದರ ಅವಹೇಳನ – ಬಿಜೆಪಿ ಶಾಸಕ ಟೈಗರ್​ ರಾಜಾಸಿಂಗ್​ ಬಂಧನ

ಪ್ರವಾದಿ ಮೊಹಮ್ಮದರ ( Prophet Mohamad ) ಬಗ್ಗೆ ರಾಜಾಸಿಂಗ್​ ಮಾಡಿದ್ದ ಅವಹೇಳನಕಾರಿ ಭಾಷಣದ ವೀಡಿಯೋ ಬಹಿರಂಗ ಆದ ಬಳಿಕ ಹೈದ್ರಾಬಾದ್​ ಪೊಲೀಸ್​ ಆಯುಕ್ತರ ಕಚೇರಿ ಎದುರು ಮುಸಲ್ಮಾನ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿದ್ದರು.

ರಾಜಾಸಿಂಗ್​ ಗೋಶಾಮಹಲ್​ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ. ಪ್ರಚೋದನಕಾರಿ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ವಿವಾದಿತ ರಾಜಕಾರಣಿ.

LEAVE A REPLY

Please enter your comment!
Please enter your name here