ಹರಿಯಾಣ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಭಿನ್ನಮತೀಯ ನಾಯಕ ಕುಲದೀಪ್ ಬಿಷ್ಣೋಯಿ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ.
ಕುಲದೀಪ್ ಬಿಷ್ಣೋಯಿ ಅವರು ಅಡ್ಡ ಮತದಾನ ಮಾಡಿದ್ದೇ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಅಜಯ್ ಮಕೇನ್ ಅವರ ಸೋಲಿಗೆ ಕಾರಣವಾಗಿತ್ತು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಿಂದ ಅಮಾನತು ಮಾಡಿರುವ ಪಕ್ಷ ಬಿಷ್ಣೋಯಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭಾ ಸ್ಪೀಕರ್ ಅವರಿಗೆ ದೂರು ನೀಡಲು ನಿರ್ಧರಿಸಿದೆ.
ಬಿಷ್ಣೋಯಿ ಅವರ ಅಡ್ಡ ಮತದಾನದಿಂದಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದ ಟಿವಿ ಉದ್ಯಮಿ ಕಾರ್ತಿಕೇಯ ಶರ್ಮಾ ಅವರು ಅಜಯ್ ಮಕೇನ್ ಅವರನ್ನು 0.6 ಮತಗಳ ಅಂತರದಿAದ ಸೋಲಿಗೆ ರಾಜ್ಯಸಭೆಗೆ ಆಯ್ಕೆ ಆದರು.
ಹರಿಯಾಣದ ರಾಜಕೀಯ ಚಾಣಕ್ಯ ಎಂದೇ ಕರೆಯಲಾಗುವ ಭಜನ್ಲಾಲ್ ಅವರ ಮಗ ಕುಲದೀಪ್ ಬಿಷ್ಣೋಯಿ.