ಗಾಂಧಿ ಸಮಾಧಿಯಲ್ಲಿ ಕಾಂಗ್ರೆಸ್​ ಸಂಕಲ್ಪ ಸತ್ಯಾಗ್ರಹ – ಅನುಮತಿ ನೀಡದ ದೆಹಲಿ ಪೊಲೀಸರು

ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್​ ಗಾಂಧಿ ಅವರನ್ನು ಅನರ್ಹಗೊಳಿಸಿ ಲೋಕಸಭಾ ಕಾರ್ಯಾಲಯ ಹೊರಡಿಸಿರುವ ಆದೇಶದ ವಿರುದ್ಧ ಇವತ್ತು ಕಾಂಗ್ರೆಸ್​ ರಾಷ್ಟ್ರವ್ಯಾಪಿ ಸತ್ಯಾಗ್ರಹ ನಡೆಸುತ್ತಿದೆ.

ನವದೆಹಲಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಮಾಧಿ ರಾಜ್​ಘಾಟ್​ನಲ್ಲಿ ಸಂಕಲ್ಪ ಸತ್ಯಾಗ್ರಹಕ್ಕೆ ತೀರ್ಮಾನಿಸಿದೆ. 

ಆದರೆ ದೆಹಲಿ ಪೊಲೀಸರು ಕಾಂಗ್ರೆಸ್​ ನಿರ್ಧರಿಸಿರುವ ಸತ್ಯಾಗ್ರಹಕ್ಕೆ ಅನುಮತಿ ನೀಡಿಲ್ಲ. 

ಸತ್ಯಾಗ್ರಹದಿಂದಾಗಿ ರಾಜ್​ಘಾಟ್​ ಸುತ್ತಮುತ್ತ ವಾಹನ ದಟ್ಟಣೆಯಾಗಲಿದೆ ಎಂದೂ, ಐಪಿಸಿ ಸೆಕ್ಷನ್​ 144ರಡಿ ರಾಜ್​ಘಾಟ್​ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿರುವ ಕಾರಣ ಸತ್ಯಾಗ್ರಹಕ್ಕೆ ಅನುಮತಿ ನೀಡಿಲ್ಲ.

ನಿಷೇಧಾಜ್ಞೆ ಹಿನ್ನೆಲೆಯಲ್ಲಿ ರಾಜ್​ಘಾಟ್​​ನಲ್ಲಿ ಐದಕ್ಕಿಂತ ಹೆಚ್ಚು ಮಂದಿ ಸೇರಲು ಅವಕಾಶ ನೀಡಲ್ಲ ಎಂದು ದೆಹಲಿ ಪೊಲೀಸರು ಕಾಂಗ್ರೆಸ್​ ನಾಯಕರಿಗೆ ತಿಳಿಸಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,  ಪ್ರಿಯಾಂಕ ಗಾಂಧಿ ಒಳಗೊಂಡಂತೆ ಕಾಂಗ್ರೆಸ್​ ನಾಯಕರ ದಂಡು ರಾಜ್​ಘಾಟ್​ನತ್ತ ತೆರಳಿದೆ.