ಕಾಂಗ್ರೆಸ್​ ಘಟಕಗಳ ಅಧ್ಯಕ್ಷರ ಬದಲಾವಣೆ

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ ಘಟಕದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ.
ಗುಜರಾತ್​ ಕಾಂಗ್ರೆಸ್​ನ ಅಧ್ಯಕ್ಷರಾಗಿ ಸಂಸದ ಶಕ್ತಿಸಿನ್ಹಾ ಗೋಯಿಲ್​ ಅವರನ್ನು ನೇಮಿಸಲಾಗಿದೆ.
ಪುದಚೇರಿ ಕಾಂಗ್ರೆಸ್​ ಅಧ್ಯಕ್ಷರನ್ನಾಗಿ ಸಂಸದ ವಿ ವೈದ್ಯಲಿಂಗಂ ಅವರನ್ನು ನೇಮಿಸಲಾಗಿದೆ.
ಶಾಸಕರಾದ ವರ್ಷ ಗಾಯ್ಕ್​ವಾಡ್​ ಅವರನ್ನು ಮುಂಬೈ ಕಾಂಗ್ರೆಸ್​ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ತೆಲಂಗಾಣಕ್ಕೆ ಉಸ್ತುವಾರಿಗಳ ನೇಮಕ:
ಈ ವರ್ಷದ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣ ಉಸ್ತುವಾರಿಯಾಗಿ ಎಐಸಿಸಿ ಕಾರ್ಯದರ್ಶಿ ಮನ್ಸೂರ್​ ಅಲಿ ಖಾನ್​ ಅವರನ್ನು ನೇಮಿಸಲಾಗಿದೆ.
ಜೊತೆಗೆ ಎಐಸಿಸಿ ಕಾರ್ಯದರ್ಶಿ ಪಿ ಸಿ ವಿಷ್ಣುನಾಥನ್​ ಅವರನ್ನೂ ತೆಲಂಗಾಣ ಉಸ್ತುವಾರಿಯಾಗಿ ನೇಮಿಸಲಾಗಿದೆ.