ಕಾಂಗ್ರೆಸ್​​ನ ಅಸಹಾಯಕ ಅಧ್ಯಕ್ಷ ಡಿಕೆ ಶಿವಕುಮಾರ್- ಬಿಜೆಪಿ ವ್ಯಂಗ್ಯ

ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಮಾತನಾಡಿದ್ದ ಉಗ್ರಪ್ಪ ಅವರ ವಿರುದ್ಧ ರಾಜ್ಯ ಕಾಂಗ್ರೆಸ್​ ಕ್ರಮ ಕೈಗೊಳ್ಳದೇ ಇರುವ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಡಿಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್​​ನ ಅಸಹಾಯಕ ಅಧ್ಯಕ್ಷ ಎಂದು ಲೇವಡಿ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಭಿಜೆಪಿ ಘಟಕ, ಪರಿಷತ್ ಚುನಾವಣೆಯಲ್ಲಿ ಯಾರಾದರೂ ಬಂಡಾಯವಾಗಿ ಸ್ಪರ್ಧಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಕೆಶಿ ಎಚ್ಚರಿಸಿದ್ದಾರೆ. ಆದರೆ ಡಿಕೆಶಿ ತಕ್ಕಡಿ ಎದ್ದೇಳುತ್ತಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲೇ ವ್ಯಂಗ್ಯವಾಡಿದ್ದ ಉಗ್ರಪ್ಪ ವಿರುದ್ಧ ಏಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ? ಭಯವೋ, ಬೆದರಿಕೆಯೋ?

ಕೆಪಿಸಿಸಿ ಕಚೇರಿಯಲ್ಲೇ ನಡೆದ “ಪಿಸುಮಾತು” ಪ್ರಕರಣ ನಡೆದು ಅದೆಷ್ಟೋ ದಿನಗಳಾದರೂ ಪ್ರಕರಣದ ರೂವಾರಿ ಉಗ್ರಪ್ಪ ವಿರುದ್ಧ ಡಿಕೆ ಶಿವಕುಮಾರ್ ಅವರಿಗೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲವೇಕೆ? ಉಗ್ರಪ್ಪ ಅವರು ಸಿದ್ದರಾಮಯ್ಯ ಬಣದವರೆಂಬ ಕಾರಣಕ್ಕೆ ಅಲ್ಪಸಂಖ್ಯಾತ ಸಮುದಾಯದ  ಸಲೀಂ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಲಾಯ್ತೇ? ಎಂದು #ಅಸಹಾಯಕಡಿಕೆಶಿ ಎಂಬ ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.

LEAVE A REPLY

Please enter your comment!
Please enter your name here