ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಮಾಜಿ ರಾಜ್ಯಸಭಾ ಸಂಸದ, ರಾಜ್ಯಸಭೆಯ ಉಪಸಭಾಪತಿ ಆಗಿದ್ದ ಕೆ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ನಾಮಪತ್ರ ಸಲ್ಲಿಸಿದ್ದಾರೆ.
ಈ ಮೂಲಕ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದ ಸಿದ್ದರಾಮಯ್ಯ ತಮ್ಮ ತಂತ್ರಗಾರಿಕೆ ಮೂಲಕ ಜೆಡಿಎಸ್ ಅಚಾನಕ್ ಟಕ್ಕರ್ ಕೊಟ್ಟಿದ್ದಾರೆ.
ಈ ಮೂಲಕ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಬೆಂಬಲದಿAದ ಗೆಲ್ಲಿಸಿಕೊಂಡು ಬರಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಜೆಡಿಎಸ್ಗೆ ಹಿನ್ನಡೆ ಆಗಿದೆ.
ರಾಜ್ಯಸಭಾ ಚುನಾವಣೆಯಲ್ಲಿ 4ರಲ್ಲಿ ಬಿಜೆಪಿಯ ಇಬ್ಬರು, ಕಾಂಗ್ರೆಸ್ನ ಒಬ್ಬರು ಆಯ್ಕೆ ಆಗಬಹುದು. ಆದರೆ ನಾಲ್ಕನೇ ಅಭ್ಯರ್ಥಿಗೆ ಬಿಜೆಪಿ ಬಳಿಯಾಗಲೀ, ಕಾಂಗ್ರೆಸ್ ಬಳಿಯಾಗಲೀ ಮತವಿಲ್ಲ.
ನಾಲ್ಕನೇ ಅಭ್ಯರ್ಥಿಯಾಗಿ ಕಾಂಗ್ರೆಸ್ಸೇ ಈಗ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್ ನಡೆ ಏನು ಎನ್ನುವುದು ಕುತೂಹಲ. ಮನ್ಸೂರ್ ಅಲಿ ಖಾನ್ಗೆ ಜೆಡಿಎಸ್ ಬೆಂಬಲ ನೀಡದೇ ಹೋದರೆ ಆಗ ಅಲ್ಪಸಂಖ್ಯಾತ ವಿರೋಧಿ ಮತ್ತು ಬಿಜೆಪಿ ಬಿ ಟೀಂ ಎಂಬ ಹಣೆಪಟ್ಟಿಯನ್ನೇ ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಬೇಕಾಗುತ್ತದೆ.