ವಿಧಾನಪರಿಷತ್ನ ನಾಲ್ಕು ಸ್ಥಾನಗಳ ಪೈಕಿ ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಈ ಮೂಲಕ ಹಾಲಿ ಎಂಎಲ್ಸಿ ಬಿಜೆಪಿಯ ಅರುಣ್ ಶಹಾಪುರ್ ಅವರಿಗೆ ಸೋಲಾಗಿದೆ.
ಪ್ರಕಾಶ್ ಹುಕ್ಕೇರಿ ಅವರು 10,250 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಅರುಣ್ ಶಹಾಪುರ್ 6,008 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಹುಕ್ಕೇರಿ ಅವರು 4512 ಮತಗಳಿಂದ ಗೆದ್ದಿದ್ದಾರೆ.
ಸತತ ಎರಡು ಬಾರಿ ಅಂದರೆ 12 ವರ್ಷಗಳವರೆಗೆ ಅರುಣ್ ಶಹಾಪುರ್ ಅವರು ಈ ಕ್ಷೇತ್ರದಿಂದ ಎಂಎಲ್ಸಿ ಆಗಿದ್ದರು.