BREAKING: ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ: ಯಾವ ಜಾತಿಯವರಿಗೆ ಎಷ್ಟು ಟಿಕೆಟ್​ ಹಂಚಿಕೆ..?

ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್​ ಮೊದಲ ಹಂತದಲ್ಲಿ 100 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್​ ಹಂಚಿಕೆ ಮಾಡಿದೆ.

ಮೊದಲ ಹಂತದಲ್ಲಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್​ ಹಂಚಿಕೆಯಲ್ಲಿ ಅಧಿಕ ಪಾಲು ನೀಡಲಾಗಿದೆ.

ಘೋಷಣೆ ಆಗಿರುವ ಅಭ್ಯರ್ಥಿಗಳ ಪೈಕಿ 32 ಮಂದಿ ಲಿಂಗಾಯತ ಸಮುದಾಯಕ್ಕೆ ಸೇರಿದವರು.

ಒಕ್ಕಲಿಗ ಸಮುದಾಯದ 19 ಮಂದಿಗೆ ಟಿಕೆಟ್​ ನೀಡಲಾಗಿದೆ.

ಈಡಿಗ ಸಮುದಾಯದ ನಾಲ್ವರಿಗೆ ಟಿಕೆಟ್​ ನೀಡಲಾಗಿದೆ.

ಬ್ರಾಹ್ಮಣ ಸಮುದಾಯದ ಐವರಿಗೆ ಟಿಕೆಟ್​ ನೀಡಲಾಗಿದೆ.

ಕುಂಬಾರ ಸಮುದಾಯದ ಒಬ್ಬರಿಗೆ ಟಿಕೆಟ್​ ನೀಡಲಾಗಿದೆ.

ಎಸ್​ಸಿ ಸಮುದಾಯದ 22 ಮಂದಿಗೆ ಮತ್ತು ಎಸ್​ಟಿ ಸಮುದಾಯದ 10 ಮಂದಿಗೆ ಟಿಕೆಟ್​ ನೀಡಲಾಗಿದೆ.

ಮುಸಲ್ಮಾನ ಸಮುದಾಯದ 8 ಮಂದಿ ಟಿಕೆಟ್​ ನೀಡಲಾಗಿದೆ.

ಜೈನ ಸಮುದಾಯುದ ಒಬ್ಬರಿಗೆ ಟಿಕೆಟ್​ ನೀಡಲಾಗಿದೆ.

ಬಂಟ ಸಮುದಾಯದ ಮೂವರಿಗೆ ಟಿಕೆಟ್​ ನೀಡಲಾಗಿದೆ.