ತಿಂಗಳಿಗೆ 2 ಸಾವಿರ, ವರ್ಷಕ್ಕೆ 24 ಸಾವಿರ,- ಪ್ರತಿ ಕುಟುಂಬದ ಯಜಮಾನಿಗೂ ಕಾಂಗ್ರೆಸ್​ ಗ್ಯಾರಂಟಿ

ಕರ್ನಾಟಕದಲ್ಲಿ ಕಾಂಗ್ರೆಸ್​ ರಾಜ್ಯದ ಜನರಿಗೆ ಎರಡನೇ ಚುನಾವಣಾ ಘೋಷಣೆಯನ್ನು ಮಾಡಿದೆ. ಒಂದು ವೇಳೆ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ಒಂದು ಕುಟುಂಬದ ಯಜಮಾನಿಗೆ (ಕುಟುಂಬದ ಗೃಹಿಣಿಗೆ) 2 ಸಾವಿರ ರೂಪಾಯಿ ನೀಡುವ ಘೋಷಣೆಯನ್ನು ಮಾಡಿದೆ.

ಇದು ಕರ್ನಾಟಕದಲ್ಲಿ ಕಾಂಗ್ರೆಸ್​ ಘೋಷಿಸುತ್ತಿರುವ ಎರಡನೇ ಗ್ಯಾರಂಟಿ. ಪ್ರತಿ ತಿಂಗಳಿಗೆ 2 ಸಾವಿರ ರೂಪಾಯಿಯಂತೆ ಪ್ರತಿ ವರ್ಷಕ್ಕೆ 24 ಸಾವಿರ ರೂಪಾಯಿ ಅಂದರೆ ಐದು ವರ್ಷದಲ್ಲಿ 1 ಲಕ್ಷದ 20 ಸಾವಿರ ರೂಪಾಯಿ ಸಿಗಲಿದೆ.

ಗೃಹ ಲಕ್ಷ್ಮೀ ಯೋಜನೆಯ ಹೆಸರಲ್ಲಿ ಕಾಂಗ್ರೆಸ್​ ಈ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಿದೆ.

ಪ್ರಜಾಧ್ವನಿ ಯಾತ್ರೆ ಆರಂಭವಾದ ಮೊದಲ ದಿನ ಜನವರಿ 11ರಂದು ಕಾಂಗ್ರೆಸ್​ ತನ್ನ ಮೊದಲ ಗ್ಯಾರಂಟಿಯನ್ನು ಘೋಷಿಸಿತ್ತು.

ಪ್ರತಿ ಮನೆಗೆ 200 ಯುನಿಟ್​ಗಳ ಉಚಿತ ವಿದ್ಯುತ್​ ಪೂರೈಸುವ ಮೊದಲ ಗ್ಯಾರಂಟಿಯನ್ನು ಘೋಷಿಸಿತ್ತು.

ಗೃಹಿಣಿಯರೇ ನಿಮ್ಮ ಮನೆಯ ಸಿಲಿಂಡರ್​ ತುಂಬಿಸುವುದು ಇನ್ನು ಮುಂದೆ ಕಾಂಗ್ರೆಸ್​ ಹೊಣೆ ಎಂದು ಕಾಂಗ್ರೆಸ್​ ಪೋಸ್ಟರ್​ಗಳನ್ನು ಹಂಚಿಕೊಂಡಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ನಾ ನಾಯಕಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ನಾಯಕಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಈ ಘೋಷಣೆಯನ್ನು ಮಾಡಿದರು.

ಹಿಮಾಚಲದಪ್ರದೇಶದಲ್ಲೂ ಕಾಂಗ್ರೆಸ್​​ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 18ರಿಂದ 60 ವರ್ಷ ನಡುವಿನ ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂಪಾಯಿ ಹಣಕಾಸು ನೆರವಿನ ಘೋಷಣೆ ಮಾಡಿತ್ತು.

LEAVE A REPLY

Please enter your comment!
Please enter your name here