ಜೈಪುರದಲ್ಲಿ ನಡೆದಿದ್ದ ಚಿಂತನಾ ಶಿಬಿರದಲ್ಲಿ ಪರಿವರ್ತನೆಯ ಮಾತುಗಳನ್ನಾಡಿದ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಿಂದ ಈ ಬಾರಿಯೂ ಮತ್ತೆ ಜೈರಾಂ ರಮೇಶ್ ಅವರಿಗೆ ಟಿಕೆಟ್ ನೀಡಿದೆ.
ಈ ಮೂಲಕ ಕರ್ನಾಟಕ ಕಾಂಗ್ರೆಸ್ನಲ್ಲಿ ಭುಗಿಲೆದ್ದಿರುವ ಭಿನ್ನಮತಕ್ಕೂ ತನಗೂ ಸಂಬಂಧವೇ ಇಲ್ಲವೆಂದು ಮತ್ತೊಮ್ಮೆ ದೃಢಪಡಿಸಿದೆ.
ಜೈರಾಂ ರಮೇಶ್ 2016ರಿಂದ ಕರ್ನಾಟಕದಿಂದ ರಾಜ್ಯಸಭೆಯಲ್ಲಿ ಸಂಸದರಾಗಿದ್ದರು. ಆದರೆ ಅವರಿಂದ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಯಾವುದೇ ಉಪಯೋಗ ಆಗಿಲ್ಲ ಎಂದು ನಿನ್ನೆ ಕೆಪಿಸಿಸಿ ಉಪಾಧ್ಯಕ್ಷ ವಿ ಆರ್ ಸುದರ್ಶನ್ ಬಹಿರಂಗ ಟೀಕೆ ಮಾಡಿದ್ದರು.
ಛತ್ತೀಸ್ಗಢದಿಂದ ರಾಜೀವ್ ಶುಕ್ಲಾ, ರಂಜಿತ್ ರಂಜನ್, ಹರಿಯಾಣದಿಂದ ಅಜಯ್ ಮಕೇನ್, ಮಧ್ಯಪ್ರದೇಶದಿಂದ ವಿವೇಕ್ ಥಂಕಾ, ಮಹಾರಾಷ್ಟçದಿಂದ ಇಮ್ರಾನ್ ಪ್ರತಾಪ್ ಘರ್ಹಿ, ರಾಜಸ್ಥಾನದಿಂದ ರಂದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್, ಪ್ರಮೋದ್ ತಿವಾರಿ, ತಮಿಳುನಾಡಿನಿಂದ ಪಿ ಚಿದಂಬರಂ ಅವರಿಗೆ ಟಿಕೆಟ್ ನೀಡಿದೆ.