ರಾಜ್ಯ ಪಠ್ಯಪುಸ್ತಕದಲ್ಲಿ ‘ಭಗತ್ ಸಿಂಗ್’ ಅವರ ಪಠ್ಯ ತೆಗೆದು ಹಾಕಿಲ್ಲ ಎನ್ನುವ ಮೂಲಕ ಸ್ವತಃ ಸರ್ಕಾರವೇ ರಾಜ್ಯದ ಜನತೆಗೆ ಸುಳ್ಳು ಹೇಳಿತೇ ಎನ್ನುವ ಪ್ರಶ್ನೆ ಮೂಡಿದೆ.
1 ರಿಂದ 10 ನೇ ತರಗತಿಯ ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿ ಹಲವು ಹಳೆ ಪಾಠಗಳನ್ನು ತೆಗೆದು ಹಾಕಿತ್ತು. ಅದರಲ್ಲಿ ಪ್ರಮುಖವಾಗಿ 10 ನೇ ತರಗತಿಯ ಪಠ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗಾ ಪಾಠವನ್ನು ತೆಗೆದುಹಾಕಿ, ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೇವಾರ್ ಅವರ ಭಾಷಣದ ಪಾಠವನ್ನು ಸೇರಿಸಲು ಶಿಫಾರಸ್ಸು ಮಾಡಿತ್ತು. ಸರ್ಕಾರವೂ ಅದನ್ನು ಅಂಗೀಕರಿಸಿ ಅನುಮೋದನೆ ನೀಡಿದೆ.
ಸರ್ಕಾರದ ಈ ನಿರ್ಧಾರದ ವಿರುದ್ಧ ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಈ ಬೆನ್ನಲ್ಲೇ, ಹೇಳಿಕೆ ನೀಡಿದ್ದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು 10 ನೇ ತರಗತಿ ಪಠ್ಯದಿಂದ ಭಗತ್ ಸಿಂಗ್ ಅವರ ಪಾಠ ತೆಗೆದುಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಇದೀಗ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಳೆದ ಸಾಲಿನ ಪಠ್ಯಪುಸ್ತಕ ಹಾಗೂ ನೂತನ ಪರಿಷ್ಕೃತ ಪಠ್ಯ ಪುಸ್ತಕದ ಪರಿವಿಡಿಯನ್ನು ಹಂಚಿಕೊಂಡಿದ್ದಾರೆ. ಪರಿಷ್ಕೃತ ಪಠ್ಯಪುಸ್ತಕದಲ್ಲಿ ಭಗತ್ ಸಿಂಗ್ ಅವರ ಯಾವುದೇ ಪಾಠ ಇಲ್ಲ.
ಈ ಬಗ್ಗೆ ಅಧಿಕೃತವಾಗಿ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರೇ ಮುದ್ರಿತ ಹೇಳಿಕೆ ನೀಡಿ, ಭಗತ್ ಸಿಂಗ್ ಅವರ ಪಾಠ ತೆಗೆದುಹಾಕಿಲ್ಲ ಎಂದು ಹೇಳಿದ್ದರು.
ಭಗತ್ ಸಿಂಗ್ ಪಾಠವನ್ನು ಕೈಬಿಟ್ಟಿದ್ದರೂ ಕೂಡ ಪಾಠವನ್ನು ತೆಗೆದುಹಾಕಿಲ್ಲ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಸುಳ್ಳು ಹೇಳುವುದನ್ನು ನಿಲ್ಲಿಸಿ, ಕೈಬಿಟ್ಟ ಪಾಠವನ್ನು ಪುನಃ ಸೇರಿಸಬೇಕು. 75ನೇ ಸ್ವಾತಂತ್ರ್ಯ ಮಹೋತ್ಸವವನ್ನು ತಲುಪಿರುವ ಈ ಹೊತ್ತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವುದನ್ನು ಬಿಜೆಪಿ ನಿಲ್ಲಿಸಬೇಕು ಎಂದು ಡಿಕೆ ಶಿವಕುಮಾರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಭಗತ್ ಸಿಂಗ್ ಪಾಠವನ್ನು ಕೈಬಿಟ್ಟಿದ್ದರೂ ಕೂಡ ಪಾಠವನ್ನು ತೆಗೆದುಹಾಕಿಲ್ಲ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಸುಳ್ಳು ಹೇಳುವುದನ್ನು ನಿಲ್ಲಿಸಿ, ಕೈಬಿಟ್ಟ ಪಾಠವನ್ನು ಪುನಃ ಸೇರಿಸಬೇಕು. 75ನೇ ಸ್ವಾತಂತ್ರ್ಯ ಮಹೋತ್ಸವವನ್ನು ತಲುಪಿರುವ ಈ ಹೊತ್ತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವುದನ್ನು ಬಿಜೆಪಿ ನಿಲ್ಲಿಸಬೇಕು. pic.twitter.com/AXNdkxJeQZ
— DK Shivakumar (@DKShivakumar) May 18, 2022