ನಟಿ ಸಾಯಿ ಪಲ್ಲವಿ ವಿರುದ್ಧ ಹೈದರಾಬಾದ್ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಗೆ ಭಜರಂಗದಳ ನಾಯಕರು ದೂರು ನೀಡಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾ ಜೊತೆಗೆ ಗೋರಕ್ಷಕರ ಬಗ್ಗೆ ಸಾಯಿಪಲ್ಲವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಯಿಪಲ್ಲವಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾನೂನು ತಜ್ಞರ ಜೊತೆ ಸಮಾಲೋಚನೆ ಮಾಡಿ ಸಾಯಿ ಪಲ್ಲವಿ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಷ್ಟಕ್ಕೂ ಸಾಯಿ ಪಲ್ಲವಿ ಹೇಳಿದ್ದೇನು?
ಕೆಲ ದಿನಗಳ ಹಿಂದೆ ‘The Kashmir Files’ ಎಂಬ ಸಿನೆಮಾ ರಿಲೀಸ್ ಆಯ್ತಲ್ಲ.. 1990ರಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲ್ಪಟ್ಟರು ಎಂಬುದನ್ನು ಈ ಸಿನೆಮಾದಲ್ಲಿ ತೋರಿಸಲಾಗಿದೆ. ಆ ಸಮಯದಲ್ಲಿ ಕಾಶ್ಮೀರದಲ್ಲಿ ನೆಲೆಸಿದ್ದ ಕಾಶ್ಮೀರಿ ಪಂಡಿತರನ್ನು ಹೆಂಗೆ ಕೊಂದರು ಎಂದು ತೋರಿಸಲಾಗಿದೆ ಅಲ್ಲವಾ? ಕೋವಿಡ್ ಕಾಲದಲ್ಲಿ ಅಂದುಕೊಳ್ತೀನಿ.. ಹಸುವನ್ನು ತೆರಳಿಸುತ್ತಿದ್ದ ವಾಹನ ತಡೆಯುತ್ತಾರೆ. ಆ ವಾಹನದ ಚಾಲಕ ಓರ್ವ ಮುಸ್ಲಿಂ ವ್ಯಕ್ತಿ. ಜೈ ಶ್ರೀರಾಮ್ ಎಂದು ಬಲವಂತವಾಗಿ ಆತನ ಬಾಯಿಂದ ಹೇಳಿಸಿದರು. ಕೆಲವರು ದಾಳಿ ಕೂಡಾ ಮಾಡಿದರು. ಕಾಶ್ಮೀರ್ ಫೈಲ್ಸ್ ಸಿನೆಮಾದಲ್ಲಿ ತೋರಿಸಿದ ಆ ಘಟನೆ, ಈ ಘಟನೆಗಳ ನಡುವೆ ವ್ಯತ್ಯಾಸವೇನಿದೆ. ಆ ಎರಡು ಘಟನೆಗಳ ಪೈಕಿ ಯಾವೊಂದು ಘಟನೆಯಲ್ಲಿ ನಮ್ಮ ತಂದೆ ಇದ್ದಿದ್ದರೂ ನನಗೆ ನೋವಾಗುತ್ತಿತ್ತು. ಈ ಎರಡು ಘಟನೆಗಳಲ್ಲಿ ಹಿಂಸೆ ಇದೆ. ನಮ್ಮ ಗೋಮಾತೆಯನ್ನು ಹೇಗೆ ಕೊಲ್ಲುತ್ತೀರಿ ಎಂಬುದು ಹಿಂದೂಗಳ ಪ್ರಶ್ನೆ ಮತ್ತು ನೋವು. ಅದೇ ರೀತಿ ಕಾಶ್ಮೀರದ ಮುಸ್ಲಿಮರದ್ದು ಕೂಡಾ ಇದು ನಮ್ಮ ಊರು ಎಂಬ ನಂಬಿಕೆ ಎಂದು ಸಾಯಿ ಪಲ್ಲವಿ ಅಭಿಪ್ರಾಯ ಪಟ್ಟಿದ್ದಾರೆ.