BREAKING: ಕಾಮನ್​​ವೆಲ್ತ್​​ ಗೇಮ್ಸ್​: ಫೈನಲ್​​ಗೆ ಭಾರತದ ಮಹಿಳಾ ಕ್ರಿಕೆಟ್​ ತಂಡ – ಬೆಳ್ಳಿ ಖಚಿತ

ಕಾಮನ್​​ವೆಲ್ತ್​​​ ಕ್ರೀಡಾಕೂಟದ ಮಹಿಳಾ ಕ್ರಿಕೆಟ್​ ಪಂದ್ಯದಲ್ಲಿ ಭಾರತ ಫೈನಲ್​ ಲಗ್ಗೆ ಇಟ್ಟು ಹೊಸ ಇತಿಹಾಸ ನಿರ್ಮಿಸಿದೆ.
ಈ ಮೂಲಕ ಮಹಿಳಾ ಕ್ರಿಕೆಟ್​ ವಿಭಾಗದಲ್ಲಿ ಭಾರತಕ್ಕೆ ಕನಿಷ್ಠ ಬೆಳ್ಳಿಯಾದರೂ ಸಿಗುವುದು ಖಚಿತವಾಗಿದೆ.
ಸೆಮಿಫೈನಲ್​ ಪಂದ್ಯದಲ್ಲಿ ಭಾರತದ ಮಹಿಳೆಯರು ಬ್ರಿಟನ್​ ಮಹಿಳಾ ತಂಡವನ್ನು 4 ರನ್​ಗಳಿಂದ ಸೋಲಿಸಿದ್ದಾರೆ.
ರೋಚಕವಾಗಿ ಕೂಡಿದ್ದ ಹಣಾಹಣಿಯಲ್ಲಿ ಭಾರತ 5 ವಿಕೆಟ್​ ನಷ್ಟಕ್ಕೆ 164 ರನ್​ ಗಳಿಸಿತ್ತು. ಆದರೆ 20 ಓವರ್​​ಗಳಲ್ಲಿ ಇಂಗ್ಲೆಂಡ್​ 6 ವಿಕೆಟ್​ ನಷ್ಟಕ್ಕೆ 160 ರನ್​ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಪರ ಸ್ಮೃತಿ ಮಂಧನ 61 ಮತ್ತು ಜೆ ರೋಡಿಗ್ರಸ್​ 44 ರನ್​ ಗಳಿಸಿದರು.

LEAVE A REPLY

Please enter your comment!
Please enter your name here