ಕಾಮನ್​ ವೆಲ್ತ್​​ ಗೇಮ್ಸ್​ : 10 ಕಿ.ಮೀ ಓಟದಲ್ಲಿ ಪ್ರಿಯಾಂಕಾ ಗೋಸ್ವಾಮಿಗೆ ಬೆಳ್ಳಿ ಪದಕ

ಬರ್ಮಿಂಗ್​ ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್​ 2022 ರ 10 ಕಿ.ಮೀ ಮಹಿಳಾ ಓಟದ ವಿಭಾಗದಲ್ಲಿ ಭಾರತಕ್ಕೆ ಮೊದಲ ಬಾರಿಗೆ ಪದಕ ದೊರೆತಿದೆ.

ಭಾರತದ ಅಥ್ಲೀಟ್ ಪ್ರಿಯಾಂಕಾ ಗೋಸ್ವಾಮಿ ಮಹಿಳೆಯರ 10 ಸಾವಿರ ಮೀಟರ್ ಓಟದ ನಡಿಗೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಪ್ರಿಯಾಂಕಾ 49:38.82 ರಲ್ಲಿ 10 ಕಿ.ಮೀ ಓಟವನ್ನು ಪೂರ್ಣಗೊಳಿಸಿದರು. ಈ ಗೆಲುವಿನೊಂದಿಗೆ ಪ್ರಿಯಾಂಕಾ ಗೋಸ್ವಾಮಿ ಇತಿಹಾಸ ಸೃಷ್ಟಿಸಿದ್ದು,10 ಕಿ.ಮೀ ಓಟ ವಿಭಾಗದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನು, ಬಾಕ್ಸಿಂಗ್​ನಲ್ಲಿ ಭಾರತದ ಇಬ್ಬರು ಕುಸ್ತಿಪಟುಗಳಾದ ವಿಘ್ನೇಶ್ ಪೊಗಾಟ್ ಮತ್ತು ಅಮಿತ್ ಪಂಗಲ್ ಪೈನಲ್ ಹಂತಕ್ಕೆ ತಲುಪಿದ್ದಾರೆ.

LEAVE A REPLY

Please enter your comment!
Please enter your name here