ವಾಣಿಜ್ಯ ಬಳಕೆಯ ಅಡುಗೆ ಅನಿಲದ ದರವನ್ನು ಪ್ರತಿ ಸಿಲಿಂಡರ್ಗೆ ಭಾನುವಾರ 102.50 ರೂ. ನಷ್ಟು ಹೆಚ್ಚಳ ಮಾಡಲಾಗಿದೆ. ಈ ಮೂಲಕ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯು 2355.50ರೂ.ಗೆ ಏರಿಕೆ ಆಗಿದೆ.
ಮನೆಗಳಲ್ಲಿ ಬಳಸುವ ಎಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸದ್ಯ 14.2 ಕೆ.ಜಿ. ತೂಕದ ಸಿಲಿಂಡರ್ ದರವು ಬೆಂಗಳೂರಿನಲ್ಲಿ 952 ರೂ. ಇದೆ.
2,253 ರೂ. ಇದ್ದ 19 ಕೆ.ಜಿ. ತೂಕದ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಈಗ 2355.50 ರೂ. ತಲುಪಿದ್ದರೆ, 5 ಕೆ.ಜಿ. ತೂಕದ ಸಿಲಿಂಡರ್ಗೆ 655 ರೂ. ನೀಡಬೇಕಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ದರ 2,400 ರೂ ದಾಟಿದೆ.
ಏಪ್ರಿಲ್ 1 ರಂದು ವಾಣಿಜ್ಯ ಬಳಕೆ ಎಲ್ಪಿಜಿ ದರ ಪ್ರತಿ ಸಿಲಿಂಡರ್ಗೆ ₹250 ರಷ್ಟು ಹೆಚ್ಚಿಸಲಾಗಿತ್ತು.