Comedian Sudhakar: ಈ ಖ್ಯಾತ ಕಮೆಡಿಯನ್ ಯಾರು ಬಲ್ಲಿರೇನು? ನಿಮಗೆ ಅಚ್ಚರಿಯಾಗುತ್ತೆ

ಇದು ಸುಮಾರು 15 – 20 ವರ್ಷಗಳ ಹಿಂದಿನ ಮಾತು.. ತೆಲುಗು ಸಿನಿಮಾಗಳಲ್ಲಿ ಹೀರೋ ಜೊತೆಗೆ ಆ ಕ್ಯಾರೆಕ್ಟರ್ ಇರಲೇಬೇಕಿತ್ತು.

ಕಮೆಡಿಯನ್ ಬ್ರಹ್ಮಾನಂದಂ ಜೊತೆ ಅವರು ಕಾಣಿಸಿಕೊಂಡರೇ ಸಾಕು ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು.

ಆದರೆ, ಅದೇನಾಯಿತೋ ಗೊತ್ತಿಲ್ಲ.. ಸಿನಿಮಾನಗಳಲ್ಲಿ ಅವರು ಕಾಣಿಸಿಕೊಳ್ಳುವುದು ಸಂಪೂರ್ಣ ನಿಂತು ಹೋಯಿತು..

ಈಗ ಅವರನ್ನು ನೋಡಿದರೇ ಗುರುತು ಪತ್ತೆ ಹಚ್ಚುವುದು ಕೂಡ ಕಷ್ಟವಾಗುತ್ತದೆ. ಅವರು ಬೇರೆ ಯಾರು ಅಲ್ಲ ಕಮೆಡಿಯನ್ ಸುಧಾಕರ್.

ಸುಧಾಕರ್ ಅವರ 15-20 ವರ್ಷಗಳ ಮುಖವನ್ನು ನೆನಪಿಗೆ ತಂದುಕೊಂಡರೇ ಈಗ ಅವರನ್ನು ಗುರುತು ಹಿಡಿಯಲು ಸಾಧ್ಯವೇ ಆಗಲ್ಲ.

20 ವರ್ಷಗಳ ಹಿಂದಿನ ಫೋಟೋಗೂ ಇಂದಿನ ಅವರ ಫೋಟೋಗೂ ತುಲನೆ ಮಾಡಿದ ನೋಡಿದರೇ ಅಜಗಜಾಂತರ ವ್ಯತ್ಯಾಸ ಕಾಣಬಹುದು.

ಆರೋಗ್ಯ ಅವರನ್ನು ಕೃಶವಾಗಿಸಿದೆ.. ಅವರನ್ನು ಬಹುಬೇಗ ಮಾಗಿಸಿದೆ.. ಇಂತಹ ಅವರನ್ನು ಫಾದರ್ಸ್ ಡೇ ನಿಮಿತ್ತ ಝೀ ವಾಹಿನಿ ಮತ್ತೆ ತೆರೆ ಮೇಲೆ ತಂದಿದೆ.

ನಟನಾಗಿ 45 ವರ್ಷ ಪೂರೈಸಿದ ಸುಧಾಕರ್ ಅವರಿಗೆ ಝೀ ಔಆಹಿನಿ ವೇದಿಕೆಯಲ್ಲಿ ಗೌರವಿಸಲಾಗಿದೆ. ಕೇಕ್ ಕತ್ತರಿಸಿ ಸುಧಾಕರ್ ಸಂಭ್ರಮಿಸಿದ್ದಾರೆ.

ರಿಲೀಸ್ ಆದ ಪ್ರೋಮೋ ಸಖತ್ ವೈರಲ್ ಆಗಿದೆ. ಹಳೆಯ ಡೈಲಾಗ್ ಒಂದನ್ನು ಸುಧಾಕರ್ ಹೊಡೆದಿದ್ದು, ತನ್ನಲ್ಲಿನ್ನು ನಟನೆ ಜೀವಂತವಾಗಿದೆ ಎಂತು ತೋರಿಸಿಕೊಂಡಿದ್ದಾರೆ.