ಹೃದಯಾಘಾತದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಹಾಸ್ಯ ನಟ ರಾಜು ಶ್ರೀವಾತ್ಸವ್(Raju Srivastav) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಹಾಸ್ಯ ನಟ ರಾಜು ಶ್ರೀವಾತ್ಸವ್(Raju Srivastav) ಅವರನ್ನು ತೀವ್ರ ನಿಗಾ ಘಟಕದ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದಾರೆ. ಕಳೆದ 46 ಗಂಟೆಗಳಿಂದ ಇವರಿಗೆ ಪ್ರಜ್ಞೆಬಂದಿಲ್ಲ. ಅಲ್ಲದೇ, ಅವರ ಮೆದುಳಿಗೆ ಹಾನಿಯಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ : GST: ಮನೆ ಬಾಡಿಗೆಗೂ ಜಿಎಸ್ಟಿ..!
ರಾಜು ಶ್ರೀವಾತ್ಸವ್ ಅವರ ಆರೋಗ್ಯದ ಬಗ್ಗೆ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುಟುಂಬಸ್ಥರಿಗೆ ಕರೆ ಮಾಡಿ ವಿಚಾರಿಸಿದ್ದಾರೆ.
58 ವರ್ಷದ ರಾಜು ಶ್ರೀವಾತ್ಸವ್ ಅವರು ಬುಧವಾರ ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
(ನಟ ಗಣೇಶ್, ದಿಗಂತ್, ಪವನ್ಕುಮಾರ್ ನಟನೆಯ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಪ್ರೇಕ್ಷಕರ ವಿಮರ್ಶೆ)