ಪುನೀತ್ ರಾಜ್​ಕುಮಾರ್ ಚಾರಿಟಿ ಆಯೋಜಿಸಿದ್ದ ಮುನಾವರ್ ಫಾರೂಕಿಯ ಸ್ಟಾಂಡ್ ಅಪ್ ಶೋ ರದ್ದು

ಬೆಂಗಳೂರು : ಇಂದು (ನವೆಂಬರ್ 28) ಬೆಂಗಳೂರಿನ ಗುಡ್ ಶೆಪರ್ಡ್​ ಸಭಾಂಗಣದಲ್ಲಿ ನಡೆಯಬೇಕಿದ್ದ ಹಾಸ್ಯನಟ ಮುನಾವರ್ ಫಾರೂಕಿ ಅವರ ‘ಡೋಂಗ್ರಿ ಟು ನೋ ವೇರ್’ ಸ್ಟಾಂಡ್ ಅಪ್ ಶೋವನ್ನು ಭಾನುವಾರ ರದ್ದುಗೊಳಿಸಲಾಗಿದೆ.

ಪುನೀತ್ ರಾಜ್​ಕುಮಾರ್ ಚಾರಿಟಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಸ್ಯನಟ ಮುನಾವರ್ ಫಾರೂಕಿಯವರು ಭಾಗವಹಿಸಬೇಕಿತ್ತು. ಆದರೆ, ಬೆಂಗಳೂರಿನ ಅಶೋಕ ನಗರದ ಪೊಲೀಸರು ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ.

ಹಾಸ್ಯನಟ ಮುನಾವರ್ ಫಾರೂಕಿ ಅವರ ಕಾರ್ಯಕ್ರಮ ರದ್ದುಗೊಳಿಸುವಂತೆ ಸಂಘಟಕರಿಗೆ ಸೂಚಿಸಿದ್ದಾರೆ. “ಹಲವಾರು ಸಂಘಟನೆಗಳು ಈ ಸ್ಟ್ಯಾಂಡ್-ಅಪ್ ಕಾಮಿಡಿ ಶೋ ವಿರೋಧಿಸುತ್ತಿವೆ ಮತ್ತು ಇದು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಇತರ ರಾಜ್ಯಗಳಲ್ಲಿ ಆತನ ವಿರುದ್ಧ ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ ಎಂದು ಅಶೋಕ್ ನಗರ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಹಾಸ್ಯನಟ ಮುನಾವರ್ ಫಾರೂಕಿಯವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಸ್ತೃತವಾಗಿ ಬರೆದಿರುವ ಅವರು, ಒಂದು ತಿಂಗಳ ಕೆಳಗೆ ಪುನೀತ್ ರಾಜ್​ಕುಮಾರ್ ಅವರ ಚಾರಿಟಿ ಕಾರ್ಯಕ್ರಮಕ್ಕಾಗಿ ನನ್ನನ್ನು ಸಂಪರ್ಕಿಸಿತ್ತು. ಪುನೀತ್ ರಾಜ್​ಕುಮಾರ್​ ಹೆಸಲಿನಲ್ಲಿ ಶೋ ಮಾರಾಟ ಮಾಡದಂತೆ ನಾನು ಮನವಿ ಮಾಡಿಕೊಂಡಿದ್ದೆ.

ಅದರಂತೆ ಕಾರ್ಯಕ್ರಮ ಭಾನವಾರ ನಡೆಯಬೇಕಿತ್ತು. ಆದರೆ, ಪೊಲೀಸರು ಕಾನೂನು ಸುವ್ಯವಸ್ಥೆ ಅಂತ ಹೇಳಿ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಕಳೆದ ಎರಡು ತಿಂಗಳುಗಳಿಂದ 12 ಕಾರ್ಯಕ್ರಮಗಳನ್ನು ಪೊಲೀಸರು ರದ್ದು ಮಾಡಿದ್ದಾರೆ. ಇದು ಅನ್ಯಾಯ. ಕಲೆಯನ್ನು ಕೊಲೆ ಮಾಡುವ ಪ್ರಯತ್ನ ಎಂದು ಬರೆದುಕೊಂಡಿದ್ದಾರೆ.

ಫಾರೂಕಿ ಮುನಾವರ್ ಅವರು ಹಾಸ್ಯ ಕಾರ್ಯಕ್ರಮವೊಂದರಲ್ಲಿ ಬೇರೆ ಧರ್ಮದ ದೇವರನ್ನು ಅಪಮಾನಗೊಳಿಸಿದ ಕಾರಣದಿಂದ ಒಂದು ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದರು.

LEAVE A REPLY

Please enter your comment!
Please enter your name here