ಮನೆ ಮಾಲೀಕನ ಎಡವಟ್ಟಿಗೆ 6 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ವಸಂತನಗರದ 5ನೇ ಕ್ರಾಸ್ ಬಳಿ ನಡೆದಿದೆ.
ಶಿವಶಂಕರ್ ಮನೆಯಲ್ಲಿ ವಿನೋದ್ ಕುಟುಂಬಸ್ಥರು ಬಾಡಿಗೆಗೆ ಇದ್ದರು. ವಾರದ ಹಿಂದೆ ವಿನೋದ್ ಫ್ಯಾಮಿಲಿ ಊರಿಗೆ ಹೋಗಿದ್ದ ವೇಳೆ ಶಿವಶಂಕರ್ ಜಿರಳೆ ಔಷಧಿ ಸಿಂಪಡಿಸಿದ್ದರು. ಇದರ ಅರಿವಿಲ್ಲದೆ ಮನೆಗೆ ಬಂದು ವಿನೋದ್ ಕುಟುಂಬಸ್ಥರು ಮಲಗಿದ್ದರು. ಈ ವೇಳೆ ಉಸಿರಾಟದ ಸಮಸ್ಯೆಯಾಗಿ ಆರು ವರ್ಷದ ಬಾಲಕಿ ಅಹನಾ ಸಾನ್ನಪ್ಪಿದ್ದಾಳೆ. ಅಸ್ವಸ್ಥಗೊಂಡಿರೋ ಮನೆ ಕುಟುಂಬಸ್ಥರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಈ ಸಂಬಂಧ ಮನೆ ಮಾಲೀಕ ಪ್ರಸಾದ್ ಪ್ರತಿಕ್ರಿಯಿಸಿ, ಮೂರು ದಿನ ಮುಂಚಿತವಾಗಿ ಅವರಿಗೆ ತಿಗಣೆ ಮದ್ದು ಹೊಡೆಯೋದಾಗಿ ಮಾಹಿತಿ ನೀಡಿದ್ದೆವು. ಅದೇ, ಕಾರಣಕ್ಕಾಗಿಯೇ ಅವರು ಕೇರಳ ಹೋಗಿದ್ದರು. ನಿನ್ನೆ ನಮಗೆ ಹೇಳದೆ ಮನೆಗೆ ಬಂದುಬಿಟ್ಟಿದ್ದಾರೆ. ಮಗುವಿನ ಸಾವಿಗೆ ಪೋಷಕರ ನಿರ್ಲಕ್ಷವೇ ಕಾರಣ ಎಂದು ಆರೋಪ ಮಾಡಿದ್ದಾರೆ.
ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಬಾಲಕಿಯ ತಂದೆ ಹಾಗೂ ತಾಯಿ ಇನ್ನೂ ಕೋಮಾ ಸ್ಥಿತಿಯಲ್ಲಿಯೇ ಇದ್ದಾರೆ. ಇವರಿಗೆ ಚಿಕಿತ್ಸೆ ಮುಂದುವರೆಯುತ್ತಿದೆ.
ಮೂಲತಃ ಕೇರಳದವರಾಗಿರುವ ವಿನೋದ್ ನಾಯರ್ ಕುಟುಂಬ ಸುಮಾರು 8 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿತ್ತು. ಬೆಂಗಳೂರಿನ ವಸಂತನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ವಿನೋದ್ ನಾಯರ್ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಗಳು ಅಹನಾ ವಸಂತನಗರದ ಶಾಲೆಯಲ್ಲಿ ಓದುತ್ತಿದ್ದಳು. ಸದ್ಯ ಘಟನೆ ಸಂಬಂಧ ಮನೆ ಮಾಲೀಕ ಶಿವಶಂಕರ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.