ಮುಖ್ಯಮಂತ್ರಿ, ಸಚಿವರು, ಸ್ಪೀಕರ್​ ಸಂಬಳ ಎಷ್ಟಿದೆ ಗೊತ್ತಾ..? ಕಳೆದ ವರ್ಷ ಎಷ್ಟು ಹೆಚ್ಚಳ ಆಯ್ತು..?

ಕರ್ನಾಟಕದಲ್ಲಿ ನಾಳೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್​ ಮತ್ತು 30 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಹಾಗಾದರೆ ಮುಖ್ಯಮಂತ್ರಿಗಳ ಸಂಬಳ, ಸಚಿವ ಸಂಬಳ, ಸ್ಪೀಕರ್​ ಮತ್ತು ಉಪ ಸ್ಪೀಕರ್​ ಸಂಬಳ ಎಷ್ಟಿರುತ್ತೆ..?

ಕೋವಿಡ್​ ಆತಂಕ ಕೊಂಚ ಮಟ್ಟಿಗೆ ತಣ್ಣಗಾದ ಬಳಿಕ ಕಳೆದ ವರ್ಷದ ಫೆಬ್ರವರಿಯಲ್ಲಿ ಆಡಳಿತ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್​ ಮತ್ತು ಜೆಡಿಎಸ್​ ಶಾಸಕರು ಮತ್ತು ವಿಧಾನಪರಿಷತ್​ ಸದಸ್ಯರು ಒಕ್ಕೊರಲಿನಿಂದ ತಮ್ಮ ತಮ್ಮ ಸಂಬಳವನ್ನು ಹೆಚ್ಚಿಸಿಕೊಂಡರು.

2015ರ ಬಳಿಕ ಐದು ವರ್ಷಕ್ಕೆ ಮತ್ತೆ 2022ರಲ್ಲಿ ಮುಖ್ಯಮಂತ್ರಿ, ಸಚಿವರು, ಸ್ಪೀಕರ್​ ಮತ್ತು ಉಪ ಸ್ಪೀಕರ್​ ಮತ್ತು ಶಾಸಕರ ವೇತನ ಶೇಕಡಾ 50ರಿಂದ 60ರಷ್ಟು ಹೆಚ್ಚಳ ಆಯಿತು.

ಮುಖ್ಯಮಂತ್ರಿ, ಸ್ಪೀಕರ್​ ಮತ್ತು ಸಭಾಪತಿ:
ವೇತನ: 75 ಸಾವಿರ ರೂಪಾಯಿ ಪ್ರತಿ ತಿಂಗಳಿಗೆ

ವಿರೋಧ ಪಕ್ಷದ ನಾಯಕರ ವೇತನ: ಪ್ರತಿ ತಿಂಗಳಿಗೆ 60 ಸಾವಿರ ರೂ.

ಗೃಹ ಭತ್ಯೆ:
ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಉಪ ಸ್ಪೀಕರ್ ಮತ್ತು ಉಪ ಸಭಾಪತಿ: 1.2 ಲಕ್ಷ ರೂಪಾಯಿ ಪ್ರತಿ ತಿಂಗಳಿಗೆ. ಸ್ಪೀಕರ್​ ಮತ್ತು ಸಭಾಪತಿಗೆ: 1.6 ಲಕ್ಷ ರೂಪಾಯಿ ಪ್ರತಿ ತಿಂಗಳಿಗೆ

ಮನೆ ನಿರ್ವಹಣಾ ಭತ್ಯೆ: 35 ಸಾವಿರ ರೂಪಾಯಿ ಪ್ರತಿ ತಿಂಗಳಿಗೆ

ಇಂಧನ ಭತ್ಯೆ: ಪ್ರತಿ ತಿಂಗಳಿಗೆ 2 ಸಾವಿರ ಲೀಟರ್​ ಇಂಧನ

ಪ್ರಯಾಣ ಭತ್ಯೆ: ಪ್ರತಿ ಕಿಲೋ ಮೀಟರ್​ಗೆ 40 ರೂಪಾಯಿ

ಅತಿಥಿ ಭತ್ಯೆ: 4ರಿಂದ 4.5 ಲಕ್ಷ ರೂಪಾಯಿ ಪ್ರತಿ ತಿಂಗಳಿಗೆ

ಮಂತ್ರಿಗಳ ವೇತನ: ಪ್ರತಿ ತಿಂಗಳಿಗೆ 60 ಸಾವಿರ ರೂಪಾಯಿ. ಉಳಿದಂತೆ ಮುಖ್ಯಮಂತ್ರಿಗಳಿಗೆ ಸಿಗುವ ಭತ್ಯೆಗಳು ಸಚಿವರಿಗೆ ಸಿಗುತ್ತವೆ.