ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊನ್ನೆ-ಮೊನ್ನೆ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಸಿನಿಮಾವನ್ನು ನೋಡಿ ಕಣ್ಣೀರು ಹಾಕಿದರು. ಬರೀ ಗಳಗಳನೇ ಅತ್ತು ಕಣ್ಣೀರು ಹಾಕಿದ್ದು ಮಾತ್ರವಲ್ಲ ಮಲ್ಟಿಪ್ಲೆಕ್ಸ್ ಥಿಯೇಟರ್ಗೆ ತಮ್ಮನ್ನು ಕರೆದುಕೊಂಡು ಹೋಗಿ ಸಿನಿಮಾ ತೋರಿಸಿ ಅಲ್ಲೇ `ತೆರಿಗೆ ವಿನಾಯಿತಿ’ ನೀಡುವಂತೆ ರಕ್ಷಿತ್ ಶೆಟ್ಟಿ ನೀಡಿದ್ದ ಮನವಿ ಪತ್ರವನ್ನು ಆಧರಿಸಿ ಬರೋಬ್ಬರೀ ಆರು ತಿಂಗಳವರೆಗೆ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ)ಯಿಂದ ವಿನಾಯಿತಿಯನ್ನೂ ಘೋಷಿಸಿ ಆದೇಶಿಸಿದ್ದರು.
ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಷ್ಟೊಂದು ದಯಾಳು, ಜನಾನುರಾಗಿ. ಆದರೆ ರಕ್ಷಿತ್ ಶೆಟ್ಟಿ ಅವರಂತೆ ಮುಖ್ಯಮಂತ್ರಿಗಳಿಗೆ ಹಳ್ಳಿಯೊಂದರ ಬಡ ಕುಟುಂಬ ತಮ್ಮ ಕಷ್ಟವನ್ನು ಸಾಕ್ಷಾತ್ ದರ್ಶನ ಮಾಡಿಸಿ ಸಹಾಯ ಕೇಳಲು ಸಾಧ್ಯವೇ..? ಒಂದು ವೇಳೆ ಆ ಊರಲ್ಲಿ ಸರ್ಕಾರದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಿಎಂ ಬೊಮ್ಮಾಯಿಯವರು ಸಿನಿಮಾ ನಿರ್ಮಾಪಕ, ನಟರೊಬ್ಬರ ಮನವಿಗೆ ಸ್ಪಂದಿಸಿದ್ದಷ್ಟು ಶೀಘ್ರವಾಗಿ ಆ ಬಡಕುಟುಂಬಕ್ಕೆ ಆ ಅಧಿಕಾರಿ ವರ್ಗ ಸ್ಪಂದಿಸಿತೇ..?
ಈ ಮೇಲಿನ ವಿಷಯವನ್ನು ಹೇಳುವುದಕ್ಕೆ ಕಾರಣ ಇದೆ. ಮಾನ್ಯ ಸಚಿವ ಸುನಿಲ್ ಕುಮಾರ್ ಅವರು ಉಸ್ತುವಾರಿ ಸಚಿವರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರ್ವತ್ತೂರು-ಮೂಡುಪಡಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ನೇರಳಕಟ್ಟೆಯಲ್ಲಿ ವಿಜಯಲಕ್ಷಿö್ಮÃ ಮತ್ತು ಚಂದ್ರಶೇಖರ್ ಕುಟುಂಬ ವಾಸವಿದೆ. ಇವರಿಗೆ ಮೂರು ವರ್ಷದ ಗಂಡು ಮಗು ಇದೆ.
ಚಂದ್ರಶೇಖರ್ ಅವರಿಗೆ ಅನಾರೋಗ್ಯ ಸಮಸ್ಯೆಯಿಂದ ಹೊರಗಡೆ ದುಡಿಮೆಗೆ ಹೋಗಲು ಆಗುತ್ತಿಲ್ಲ. ವಿಜಯಲಕ್ಷಿö್ಮÃ ಅವರೇ ದಿನಗೂಲಿ ಮಾಡಿ ಸಂಸಾರವನ್ನು ಸಾಕಬೇಕಿದೆ.
ಈ ಕುಟುಂಬಕ್ಕೆ ಒಂದು ಸೂರು ಇಲ್ಲ. ಈಗಿರುವ ಮನೆಯೊಂದು ಸರ್ಕಾರಿ ಭೂಮಿಯಲ್ಲಿದೆಯಾದರೂ ಅದು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ.
ಈ ಹಿನ್ನೆಲೆಯಲ್ಲಿ ಇರ್ವತ್ತೂರು ಗ್ರಾಮ ಪಂಚಾಯತ್ನ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪಕ್ಷಬೇಧ ಮರೆತು ಒಗ್ಗಟ್ಟಾಗಿ ವಿಜಯಲಕ್ಷಿö್ಮÃ ಅವರ ಕುಟುಂಬಕ್ಕೆ 5 ರಿಂದ 9 ಸೆಂಟ್ಸ್ ಸರ್ಕಾರಿ ಭೂಮಿಯನ್ನು ಕೊಟ್ಟು ಸರ್ಕಾರದ ವಸತಿ ಯೋಜನೆಯಡಿಯೇ ಮನೆಯೊಂದು ಕಟ್ಟಿಸಿಕೊಡಬೇಕೆಂದು ಬಯಸಿದ್ದಾರೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೂಡಾ ಈ ಕುಟುಂಬ ಸರ್ಕಾರಿ ಮನೆ ಕಟ್ಟಿಸಿಕೊಡಬಹುದು ಎಂದು ಹೇಳುತ್ತಿದ್ದಾರೆ.
ಆದರೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಇರುವಷ್ಟು ಉದಾರ, ದಯಾಳು ಗುಣ ಆ ಗ್ರಾಮ ಪಂಚಾಯತ್ನ ಗ್ರಾಮ ಲೆಕ್ಕಿಗ ರಾಜು ಎಂಬವರಿಗೆ ಇಲ್ಲ.
ವಿಜಯಲಕ್ಷಿö್ಮ ಅವರ ಈಗಿರುವ ಮನೆ ರಸ್ತೆ ಬದಿ ಸರ್ಕಾರಿ ಭೂಮಿಯಲ್ಲಿದೆ, ಅಲ್ಲಿ ಭೂಮಿ ಕೊಡಲು ಆಗಲ್ಲ ಎಂದು ಹೇಳುವ ಗ್ರಾಮ ಲೆಕ್ಕಿಗರು ಮನೆ ಬಳಿಯಲ್ಲೇ ಇರುವ ಬಾಕಿ ಸರ್ಕಾರಿ ಭೂಮಿಯನ್ನೂ ನೀಡಲು ಒಪ್ಪುತ್ತಿಲ್ಲ. ಈ ಗ್ರಾಮ ಲೆಕ್ಕಿಗರ ಪ್ರಕಾರ ಅದು ಪಟ್ಟ ಜಾಗ, ಅದು ಸರ್ಕಾರಿ ಭೂಮಿಯಲ್ಲ. ಆದರೆ ಸರ್ಕಾರಿ ದಾಖಲೆಯ ಪ್ರಕಾರ ಅದು ಸರ್ಕಾರಿ ಭೂಮಿ. ಆ ಸರ್ಕಾರಿ ಭೂಮಿಯಲ್ಲಿ ಈಗಾಗಲೇ ಸರ್ಕಾರವೇ ನೀರಿನ ಟ್ಯಾಂಕ್ನ್ನೂ ಕಟ್ಟಿಸಿದೆ.
ಪಂಚಾಯತ್ನ ಎಲ್ಲ ಸದಸ್ಯರೂ ಪಕ್ಷ ಬೇಧ ಮರೆತು ಆ ಕುಟುಂಬಕ್ಕೆ ಸಹಾಯ ಮಾಡೋಣ ಎಂದರೂ ಆ ನೆರವು ನೀಡಲು ಕಾನೂನಿನಲ್ಲಿ ಅವಕಾಶವಿದೆಯಾದರೂ ಗ್ರಾಮ ಲೆಕ್ಕಿಗ ರಾಜು ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಂತೆ ದೊಡ್ಡ ಮನಸ್ಸು ಮಾಡುತ್ತಿಲ್ಲ.
ಅರ್ಜಿಗಳ ಮೇಲೆ ಅರ್ಜಿ ನೀಡಿದರೂ ಗ್ರಾಮ ಪಂಚಾಯತ್ ಸದಸ್ಯರೇ ಮನವಿ ಮಾಡುತ್ತಿದ್ದರೂ ಈ ಗ್ರಾಮ ಲೆಕ್ಕಿಗ ರಾಜು ಅವರಿಗೆ ಯಾಕಿಷ್ಟು ಹಠಮಾರಿತನ ಎನ್ನುವುದು ಗ್ರಾಮ ಪಂಚಾಯತ್ ಸದಸ್ಯರ ಪ್ರಶ್ನೆ.