ಕೇವಲ ಐದತ್ತು ನಿಮಿಷವಷ್ಟೇ ಮಳೆ ಹಾನಿ ವೀಕ್ಷಿಸಿ, ಆ ಬಳಿಕ ಸೀದಾ ಮದುವೆ ಕಾರ್ಯಕ್ರಮಕ್ಕೆ ಹೋಗುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾವು `ಕಾಮನ್ಮ್ಯಾನ್ ಸಿಎಂ’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಧಾರಾಕಾರ ಮಳೆಯಿಂದ ಅಪಾರ ಹಾನಿಗೊಳಗಾಗಿರುವ ಸಾಯಿ ಲೇಔಟ್, ನಾಗಪ್ಪ ರೆಡ್ಡಿ ಲೇಔಟ್ ಮತ್ತು ಪೈ ಲೇಔಟ್ಗೆ ಸಿಎಂ ಬಸವರಾಜ ಬೊಮ್ಮಾಯಿ ಬಂದರು. ಆದರೆ ಸಚಿವರ ಜೊತೆಗೆ ಸಾಯಿ ಲೇಔಟ್ ದ್ವಾರದಲ್ಲಿ ನಿಂತು ಸಿಎಂ ಮಳೆ ಹಾನಿ ವೀಕ್ಷಿಸಿ ತೆರಳಿದರು.
ಬಸವರಾಜ ಬೊಮ್ಮಾಯಿ ಅವರು ಕಾಮನ್ಮ್ಯಾನ್ ಸಿಎಂ ಆಗಿರುವ ಕಾರಣ ಪೊಲೀಸರು ಮುಖ್ಯಮಂತ್ರಿಗಳ ಬಳಿ ಜನರು ಬರದಂತೆ ಬ್ಯಾರಿಕೇಡ್ ಹಾಕಿ ತಡೆದರು. ಮುಂಜಾನೆಯಿAದಲೇ ಸಿಎಂ ಬರುತ್ತಾರೆಂದು ಕಷ್ಟಗಳ ಪಟ್ಟಿ ಹಿಡಿದು ಕಾದು ನಿಂತಿದ್ದ ಜನ ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಜನಸಾಮಾನ್ಯರಿಗೆ ಮಳೆ ಹಾನಿ ಆಗಿರುವ ಸಂಕಷ್ಟ ಒಂದೆಡೆಯಾದ್ರೆ ಬಿಜೆಪಿ ಕಾರ್ಯಕರ್ತರು ಆನಂದದಲ್ಲಿ ತೇಲಿದರು. ಸಿಎಂ ಬರುವಾಗ ಪುಷ್ಪಮಳೆಗೆರದು ಸಂಭ್ರಮಿಸಿದರು.
ಸೀದಾ ಮದುವೆಗೆ ತೆರಳಿದ ಸಿಎಂ:
ಕೇವಲ ಐದತ್ತು ನಿಮಿಷದಲ್ಲಿ ಮಳೆ ಹಾನಿ ವೀಕ್ಷಿಸಿದ ಕಗ್ಗಲಿಪುರದ ಬಳಿ ನಡೆಯುತ್ತಿದ್ದ ಮದುವೆಗೆ ತೆರಳಿದರು. ಮುಖ್ಯಮಂತ್ರಿಗಳ ಈ ದಿಢೀರ್ ಮಾರ್ಗ ಬದಲಾವಣೆಯಿಂದ ಅಧಿಕಾರಿಗಳೂ ಕಕ್ಕಾಬಿಕ್ಕಿಯಾದರು.