ಅಮರನಾಥ ಗುಹಾ ದೇಗುಲದ ಬಳಿ ಸಂಭವಿಸಿದ ಮೇಘಾಸ್ಫೋಟದ ಪ್ರವಾಹದಲ್ಲಿ 16 ಮಂದಿ ಮೃತಪಟ್ಟು ಹಲವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ಸರ್ಕಾರ ಸ್ಥಗಿತಗೊಳಿಸಿ ಆದೇಶಿಸಿದೆ.
ಕೇದಾರನಾಥ ಯಾತ್ರೆಯನ್ನು ಮುಂದೂಡಿಕೆ ಮಾಡಲಾಗಿದೆ. ಸೋನಪ್ರಯಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಹಾಗೂ ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಡಳಿತ ತಿಳಿಸಿದೆ.
ಅಮರನಾಥ ಗುಹಾ ದೇಗುಲದ ಸಮೀಪವಿರುವ ಟೆಂಟ್ಗಳು ಮತ್ತು ಸಮುದಾಯ ಅಡುಗೆಮನೆಗಳು ಶುಕ್ರವಾರ ಸಂಜೆ ಸುರಿದ ಮಳೆಯ ನಂತರ ನೀರಿನ ರಭಸದಿಂದ ಹರಿದು ಬಂದ ಮಣ್ಣು ಮತ್ತು ಕಲ್ಲುಗಳಿಂದ ಜಖಂಗೊಂಡಿವೆ.
ಅಮರನಾಥ ಗುಹೆಯ ಬಳಿ ಹಠಾತ್ ಪ್ರವಾಹದ ನಂತರ ಅಲ್ಲಿ ಸಿಲುಕಿದ್ದ 15 ಸಾವಿರ ಯಾತ್ರಿಕರನ್ನು ಪಂಜತರ್ನಿ ಮೂಲ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. 40 ಜನ ನಾಪತ್ತೆಯಾಗಿದ್ದಾರೆ.