ಪ್ರೀತಿಗೆ ಒಪ್ಪದ 9ನೇ ತರಗತಿ ಬಾಲಕಿಯ ಕುತ್ತಿಗೆಗೆ ಹಾಡಹಗಲೇ ಗುಂಡೇಟು

Bihar 15 Year old girl shot
ಪ್ರೀತಿಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ 15 ವರ್ಷದ ಬಾಲಕಿಯನ್ನು ಹಾಡಹಗಲೇ ಪಿಸ್ತೂಲ್​ನಿಂದ ಶೂಟ್​ ಮಾಡಲಾಗಿದೆ.
ಆರ್​ಜೆಡಿ-ಜೆಡಿಯು-ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿರುವ ಬಿಹಾರದಲ್ಲಿ (Bihar) ಕೃತ್ಯ ನಡೆದಿದೆ.
ಬುಧವಾರ ಬೆಳಗ್ಗೆ 7.30ರ ವೇಳೆ ಸಿಪಾರಾದ ಇಂದ್ರಪುರಿಯಲ್ಲಿ ಕೃತ್ಯ ಎಸಗಲಾಗಿದೆ.

ಇದನ್ನೂ ಓದಿ: ಲೈಗರ್’ ಸಿನಿಮಾದ ಖಡಕ್ ಖಳನಾಯಕ ಇವ್ರೇ..! ವಿಜಯ್ ದೇವರಕೊಂಡ ಎದುರು ಇವ್ರೇ ವಿಲನ್​..!

ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಹುಡುಗಿಯ ಬರುವಿಕೆಗೆ ಕೈಯಲ್ಲಿ ಪಿಸ್ತೂಲು ಹಿಡಿದು ಕಾದಿದ್ದ ಯುವಕ ಆಕೆ ಬರುತ್ತಿದ್ದಂತೆ ಕೆಲ ಹೆಜ್ಜೆ ಆಕೆಯನ್ನು ಹಿಂಬಾಲಿಸಿ ಆಕೆಯ ಕುತ್ತಿ್ಗೆ ಗುಂಡು ಹಾರಿಸಿದ್ದಾನೆ.
ಶೂಟೌಟ್​​ ಆದ ತಕ್ಷಣವೇ ಆ ಬಾಲಕಿ ಕೆಳಗೆ ಕುಸಿದುಬಿದ್ದಿದ್ದಾಳೆ. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
9ನೇ ತರಗತಿ ಓದುತ್ತಿರುವ ಈಕೆ ತರಕಾರಿ ವ್ಯಾಪಾರಿಯ ಮಗಳಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಪಾತಕಿಯನ್ನು ಇನ್ನಷ್ಟೇ ಬಂಧಿಸಬೇಕಿದೆ.

LEAVE A REPLY

Please enter your comment!
Please enter your name here