ಹಿಜಬ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ವಿಚಾರಣೆಗೆ ನಿರ್ದಿಷ್ಟ ದಿನಾಂಕ ನಿಗದಿ ಮಾಡಲು ನಿರಾಕರಿಸಿದ್ದಾರೆ.
ಇಂದು ಕೋರ್ಟ್ ಕಲಾಪ ಆರಂಭವಾದ ಕೂಡಲೇ, ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಹಿರಿಯ ವಕೀಲ ದೇವದತ್ತ ಕಾಮತ್ ವಿಷಯ ಪ್ರಸ್ತಾಪಿಸಿದರು. ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದರು.
ಹಿರಿಯ ವಕೀಲ ದೇವದತ್ತ ಕಾಮತ್ – ಮಕ್ಕಳಿಗೆ ಪರೀಕ್ಷೆ ಶುರುವಾಗುತ್ತಿದೆ. ಈ ಪ್ರಕರಣಗ ಬಗ್ಗೆ ತುರ್ತು ವಿಚಾರಣೆ ನಡೆಸಬೇಕಿದೆ.
CJI: ಪರೀಕ್ಷೆಗಳಿಗೂ ಈ ವಿಷಯಕ್ಕೂ ಸಂಬಂಧವಿಲ್ಲ.
SG: ಈ ವಿಚಾರವನ್ನು ಪದೇ ಪದೇ ಪ್ರಸ್ತಾಪಿ ಸಲಾಗುತ್ತಿದೆ.
CJI: ಸಾಲಿಸಿಟರ್ ಜನರಲ್ ನೀವು ಸುಮ್ಮನಿರಿ.. ವಿಷಯವನ್ನು ಸೂಕ್ಷ್ಮಗೊಳಿಸಬೇಡಿ
ಹಿರಿಯ ವಕೀಲ ದೇವದತ್ತ ಕಾಮತ್ – ಇದೆ ತಿಂಗಳ 28ರಿಂದ ಪರೀಕ್ಷೆ ಆರಂಭವಾಗುತ್ತಿವೆ. ಹಿಜಬ್ ಧರಿಸಿದ ಮಕ್ಕಳನ್ನು ಶಾಲೆಗೆ ಬರದಂತೆ ತಡೆಯಲಾಗುತ್ತಿದೆ. ಅವರ ಒಂದು ವರ್ಷದ ಶಿಕ್ಷಣ ಹಾಳಾಗುವ ಆತಂಕವಿದೆ.
CJI: ಮುಂದಿನ ಐಟಂ ಪ್ಲೀಸ್
ಮಾರ್ಚ್ 16ರಂದು ಅರ್ಜಿ ಸಲ್ಲಿಸಿದ್ದ ವೇಳೆ ಹೋಳಿ ರಜೆ ಬಳಿಕ ಈ ಮೆಲ್ಮನವಿ ಅರ್ಜಿಗಳ ನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದು CJI ರಮಣ ತಿಳಿಸಿದ್ದರು.