ರಶ್ಮಿಕಾ ಬಳಿ ಯಾರಾದರೂ ಹೋದ್ರೆ ಆತ ಸಹಿಸಲ್ವಂತೆ

ಬೆಂಗಳೂರು: ಕನ್ನಡತಿ ರಶ್ಮಿಕಾ ಮಂದಣ್ಣ ಬಳಿ ಯಾರೇ ಬಂದರೂ ಆತ ಕೋಪಿಸಿಕೊಳ್ಳುತ್ತಾನೆ, ಅವರನ್ನು ದ್ವೇಷಿಸುತ್ತಾನೆ. ನೆಲದ ಮೇಲೆ ಬಿದ್ದು ಹೊರಳಾಡುತ್ತಾನೆ..ಅಷ್ಟಕ್ಕೂ ಯಾರವನು ?

ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ತೆರವಾದ ಬಳಿಕ ಶೂಟಿಂಗ್ ಸೆಟ್ ಗಳಿಗೆ ಹಾಜರು ಆಗಿದ್ದಾರೆ.

ರಶ್ಮಿಕಾ ಶೂಟಿಂಗ್ ಮಧ್ಯೆಯೂ ಬಿಡುವು ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ಲೆಟೆಸ್ಟ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಟಚ್ ನಲ್ಲಿರುತ್ತಾರೆ. ಇದೀಗ ಅವರು ಮಾಡಿರುವ ಟ್ವೀಟ್ ವೊಂದು ಸಖತ್ ಸದ್ದು ಮಾಡುತ್ತಿದೆ.

” ನನ್ನ ಸನಿಹ ಯಾರೇ ಬಂದರು ಈತ ದ್ವೇಷಿಸುತ್ತಾನೆ, ನೆಲದ ಮೇಲೆ ಬಿದ್ದು ಹೊರಳಾಡುತ್ತಾನೆ” ಎಂದು ರಶ್ಮಿಕಾ ಟ್ವೀಟ್ ಮಾಡಿದ್ದಾರೆ. ಹೀಗೆ ಮಾಡುವುದು ಬೇರೆ ಯಾರು ಅಲ್ಲ ಅವರ ಮುದ್ದಿನ ನಾಯಿ ಔರಾ ಯಂತೆ.

ತಮ್ಮ ಮುಖಕ್ಕೆ ಮೇಕಪ್ ಮಾಡುತ್ತಿದ್ದವಳಿಗೆ ತಮ್ಮ ಶ್ವಾನ ಡಿಸ್ಟರ್ಬ್ ಮಾಡುತ್ತಿರುವ ಫೋಟೊವೊಂದನ್ನು ಹಂಚಿಕೊಂಡಿರುವ ರಶ್ಮಿಕಾ, ಮೇಕಪ್ ಆರ್ಟಿಸ್ಟ್ ವೈಷ್ಣವಿ ಅವರಿಗೆ ಕ್ಷಮೆ ಕೋರಿದ್ದಾರೆ.

LEAVE A REPLY

Please enter your comment!
Please enter your name here